Bhagya Lakshmi: ಶ್ರೇಷ್ಠಾ ಮೇಲೆ ಎಲ್ಲಾ ತಪ್ಪು ಹೊರಿಸಿದ ತಾಂಡವ್! ಭಾಗ್ಯಾಗೆ ಡಿವೋರ್ಸ್ ಕೊಡ್ತಾನಾ?
"ನೀನು ಒಪ್ಪಿದ್ರೆ ನಾನು ಮದುವೆ ಆಗಲು ಸಿದ್ಧ. ಭಾಗ್ಯಗೆ ಡಿವೋರ್ಸ್ ಕೊಡ್ತೇನೆ. ನೀನು ನನ್ನ ಮನೆಗೆ ಬರಬೇಕು. ನನ್ನ ಅಪ್ಪ-ಅಮ್ಮ, ಮಕ್ಕಳನ್ನು ನೋಡಿಕೊಳ್ಳಬೇಕು. ಓಕೆನಾ" ಎಂದು ಕೇಳಿದ್ದಾನೆ. ಹಾಗಾದ್ರೆ ತಾಂಡವ್ ಭಾಗ್ಯಾಗೆ ಡಿವೋರ್ಸ್ ನೀಡಿ ಶ್ರೇಷ್ಠಾಳನ್ನು ಮದುವೆ ಆಗ್ತಾನಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಇದು.
2/ 8
ಈತ ತಾಂಡವ್ ಸೂರ್ಯವಂಶಿ ಭಾಗ್ಯಾಳ ಜೊತೆ ಮದುವೆ ಆಗಿ 2 ಮಕ್ಕಳಿದ್ದಾರೆ. ಆದ್ರೂ ಇವನಿಗೆ ಭಾಗ್ಯ ಕಂಡ್ರೆ ಇಷ್ಟ ಇಲ್ಲ. ಏನೂ ಗೊತ್ತಾಗಲ್ಲ. ಇವಳೊಂದು ಕುಗ್ಗು ಎಂದು ಬೈಯ್ತಾ ಇರ್ತಾನೆ.
3/ 8
ತಾಂಡವ್ ಭಾಗ್ಯಾಳಿಗೆ ಮೋಸ ಮಾಡ್ತಾ ಇದ್ದಾನೆ. ಶ್ರೇಷ್ಠಾ ಎನ್ನುವ ಹುಡುಗಿ ಜೊತೆ ಸಂಬಂಧ ಹೊಂದಿದ್ದಾನೆ. ಶ್ರೇಷ್ಠಾ ಜೊತೆ ಸದಾ ಓಡಾಡುತ್ತಾ ಇರುತ್ತಾನೆ, ಇಬ್ಬರ ಸಂಬಂಧದ ಬಗ್ಗೆ ತಾಂಡವ್ ತಾಯಿ ಕುಸುಮಾಗೆ ಅನುಮಾನ ಬಂದಿದೆ.
4/ 8
ಕುಸುಮಾ ಶ್ರೇಷ್ಠಾ ಮನೆಗೆ ಬಂದು ನನ್ನ ಮಗ ಶ್ರೀರಾಮ, ನೀನು ಮೆನಕೆ ತರ ಅವನ ಮುಂದೆ ಡ್ಯಾನ್ಸ್ ಮಾಡಿ ಅವನನ್ನು ಬುಟ್ಟಿಗೆ ಹಾಕಿಕೊಳ್ಳಬೇಡ. ನನ್ನ ಮಗನ ಸಹವಾಸಕ್ಕೆ ಬರಬೇಡ ಎಂದು ಖಡಕ್ ಆಗಿ ವಾರ್ನ್ ಮಾಡಿದ್ದಾಳೆ.
5/ 8
ಅಲ್ಲದೇ ಇನ್ನೊಂದು ಸಾರಿ ಈ ರೀತಿ ಮಾಡಿದ್ರೆ ನನ್ನ ಮಗನಿಗೆ ಹೇಳಿ ನಿನ್ನ ಕೆಲಸದಿಂದ ತೆಗೆಸುತ್ತೇನೆ. ನನ್ನ ಮಗ, ಸೊಸೆ ಫೋಟೋ ನೋಡು ದಿನ ಎಂದು ಅದನ್ನು ಕೊಟ್ಟು ಹೋಗಿದ್ದಾಳೆ.
6/ 8
ಶ್ರೇಷ್ಠಾಗೆ ಕುಸುಮಾ ಅವಮಾನ ಮಾಡಿದ ಕಾರಣ, ಶ್ರೇಷ್ಠಾ ತಾಂಡವ್ನನ್ನು ಅವಳ ಮನೆಯಿಂದ ಆಚೆ ಹಾಕಿದ್ದಾಳೆ. ಅದಕ್ಕೆ ತಾಂಡವ್ ನಿನ್ನ ತಪ್ಪು, ಮನೆಯಲ್ಲಿದ್ದಾಗ ಕಾಲ್ ಮಾಡಬೇಡ ಅಂದ್ರೂ ಮಾಡ್ತೀಯಾ. ನಮ್ಮ ಅಮ್ಮನ ಬಳಿ ಆ ರೀತಿ ಯಾಕೆ ಮಾತನಾಡಿದೆ. ನಿನ್ನದೇ ತಪ್ಪು ಎಂದಿದ್ದಾನೆ.
7/ 8
ಶ್ರೇಷ್ಠಾ, ನೀನು ಮಾತ್ರ ಒಳ್ಳೆಯವನಾ? ನಾನು ಕೆಟ್ಟವಳಾ? ನಿನಗೆ ನನ್ನ ಮೇಲೆ ಪ್ರೀತಿ ಇದ್ರೆ ನನ್ನ ಮದುವೆ ಆಗು. ಆ ಭಾಗ್ಯನಿಗೆ ಡಿವೋರ್ಸ್ ಕೊಡು ಎಂದು ಹೇಳಿದ್ದಾಳೆ.
8/ 8
ನೀನು ಒಪ್ಪಿದ್ರೆ ನಾನು ಮದುವೆ ಆಗಲು ಸಿದ್ಧ. ಭಾಗ್ಯಗೆ ಡಿವೋರ್ಸ್ ಕೊಡ್ತೇನೆ. ನೀನು ನನ್ನ ಮನೆಗೆ ಬರಬೇಕು. ನನ್ನ ಅಪ್ಪ-ಅಮ್ಮ, ಮಕ್ಕಳನ್ನು ನೋಡಿಕೊಳ್ಳಬೇಕು. ಓಕೆನಾ ಎಂದು ಕೇಳಿದ್ದಾನೆ. ಹಾಗಾದ್ರೆ ತಾಂಡವ್ ಭಾಗ್ಯಾಗೆ ಡಿವೋರ್ಸ್ ನೀಡಿ ಶ್ರೇಷ್ಠಾಳನ್ನು ಮದುವೆ ಆಗ್ತಾನಾ ನೋಡಬೇಕು.