ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಭಾಗ್ಯಲಕ್ಷ್ಮಿ ಎನ್ನುವ ಧಾರಾವಾಹಿ ಪ್ರಸಾರವಾಗುತ್ತಿದೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ಸೀರಿಯಲ್‍ನಲ್ಲಿ ತಂಗಿ ಮದುವೆ ಸಂಭ್ರಮ ನಡೆಯುತ್ತಿದೆ.
2/ 8
ತಂಗಿಗೆ ಒಳ್ಳೆ ಹುಡುಗ ಬೇಕು ಎಂತಿದ್ದ ಭಾಗ್ಯನಿಗೆ ಒಳ್ಳೆ ಗಂಡು ಸಿಕ್ಕಿದ್ದಾನೆ. ತನ್ನ ಮೈದುನಾ ವೈಷ್ಣವ್ ಜೊತೆಯೇ ಲಕ್ಷ್ಮಿ ಮದುವೆ ನಡೆಯುತ್ತಿದೆ. ಅದಕ್ಕೆ ಭಾಗ್ಯ ಖುಷಿಯಾಗಿದ್ದಾಳೆ.
3/ 8
ಲಕ್ಷ್ಮಿ ಅರಿಶಿಣ ಶಾಸ್ತ್ರ ನಡೆಯುತ್ತಿದ್ದು, ಆ ಸಂಭ್ರಮದಲ್ಲಿ ಭಾಗಿಯಾಗಲು ಕೆಂಡಸಂಪಿಗೆ ಧಾರಾವಾಹಿಯ ಸುಮನಾ ಮತ್ತು ಪುಣ್ಯವತಿ ಧಾರಾವಾಹಿಯ ಪದ್ಮಿನಿ ಬಂದಿದ್ದಾರೆ.
4/ 8
ಗೆಳತಿ ಲಕ್ಷ್ಮಿಗೆ ರೇಗಿಸುತ್ತಿದ್ದಾರೆ. ಮೊನ್ನೆ ತನಕ ಕಿರಾಣಿ ಅಂಗಡಿ ಅಂತ ಓಡಾಡ್ತಾ ಇದ್ದವಳು ಮದುವೆ ಆಗ್ತಾ ಇದ್ದೀಯಾ ಎಂದು ಕಾಲೆಳೆಯುತ್ತಿದ್ದಾರೆ.
5/ 8
ಒಂದು ಹೆಣ್ಣನ್ನು ಎಷ್ಟು ಚೆಂದವಾಗಿ ಅಲಂಕಾರ ಮಾಡ್ತೀವೋ, ಕಳಸಕ್ಕೂ ಅಷ್ಟೇ ಚೆನ್ನಾಗಿ ಅಲಂಕಾರ ಮಾಡಬೇಕಂತೆ ಎಂದು ಸುಮನಾ ಹೇಳ್ತಾ ಇದ್ದಾಳೆ. ಎಲ್ಲರೂ ಹೌದು ಎಂದಿದ್ದಾರೆ.
6/ 8
ಈಗಾಗಲೇ ಗಂಡಿನ ಮನೆಯಲ್ಲಿ ಕಳಸಾ ರೆಡಿ ಇರಬಹುದು ಅಲ್ವಾ ಎಂದು ಪದ್ಮಿನಿ ಕೇಳ್ತಾಳೆ. ಅದಕ್ಕೆ ಲಕ್ಷ್ಮಿ ನಾಚಿ ನೀರಾಗ್ತಾಳೆ. ವೈಷ್ಣವ್ ಹೆಸರು ಕೇಳಿ ನಮ್ಮ ಹುಡುಗಿಗೆ ಖುಷಿ ಎಂದು ಎಲ್ಲರೂ ಲಕ್ಷ್ಮಿಗೆ ರೇಗಿಸುತ್ತಾರೆ.
7/ 8
ಕೊನೆಗೂ ಭಾಗ್ಯಾಗೆ ತನ್ನ ತಂಗಿ ಮದುವೆ ನಡೆಯುತ್ತಿದೆ ಎಂದು ಖುಷಿ ಆಗಿದೆ. ಆಕೆಯೇ ತಾಯಿ ಸ್ಥಾನದಲ್ಲಿ ನಿಂತು ಎಲ್ಲಾ ಕೆಲಸವನ್ನು ಮಾಡ್ತಾ ಇದ್ದಾಳೆ.
8/ 8
ವೈಷ್ಣವ್ ಮದುವೆ ಬೇಡ ಎನ್ನುತ್ತಿದ್ದಾನೆ. ಲಕ್ಷ್ಮಿ ಮದುವೆ ಎಲ್ಲಾ ತಯಾರಿ ನಡೆಸಿಕೊಂಡಿದ್ದಾಳೆ. ಮದುವೆ ಆಗುತ್ತಾ? ಇಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
First published:
18
Bhagya Lakshmi: ಲಕ್ಷ್ಮಿ ಅರಿಶಿಣ ಶಾಸ್ತ್ರಕ್ಕೆ ಬಂದ ಸುಮನಾ, ಪದ್ಮಿನಿ, ಭಾಗ್ಯಾಗೆ ತಂಗಿ ಮದುವೆ ಸಂಭ್ರಮ!