Antarapata: ದುರಹಂಕಾರಿ ಸಮೀರಾಗೆ ಆರಾಧನಾ ಸವಾಲು! ಕೈಯಲ್ಲಿ ಕೆಲಸವಿಲ್ಲದ ಹುಡುಗಿ ದೊಡ್ಡ ಕಂಪನಿ ಕಟ್ತಾಳಾ?

ಆರಾಧನಾ ತನ್ನ ಬಾಸ್ ಸಮೀರಾಗೆ ಸವಾಲು ಹಾಕಿ ಕೆಲಸ ಬಿಟ್ಟಿದ್ದಾಳೆ. ದೊಡ್ಡ ಕಂಪನಿ ಕಟ್ತೇನೆ ಎಂದು ಚಾಲೆಂಜ್ ಮಾಡಿದ್ದಾಳೆ. ಮನೆ ಬಾಡಿಗೆ ಕಟ್ಟೋಕೆ ಹಣವಿಲ್ಲದೇ ಪರದಾಡುತ್ತಿರುವವಳು ದೊಡ್ಡ ಕಂಪನಿ ಹೇಗೆ ಕಟ್ತಾಳೆ ಅನ್ನುವುದೇ ಸವಾಲು.

First published:

  • 18

    Antarapata: ದುರಹಂಕಾರಿ ಸಮೀರಾಗೆ ಆರಾಧನಾ ಸವಾಲು! ಕೈಯಲ್ಲಿ ಕೆಲಸವಿಲ್ಲದ ಹುಡುಗಿ ದೊಡ್ಡ ಕಂಪನಿ ಕಟ್ತಾಳಾ?

    ಕಲರ್ಸ್ ಕನ್ನಡದಲ್ಲಿ ರಾತ್ರಿ 8.30ಕ್ಕೆ ಅಂತರಪಟ ಸೀರಿಯಲ್ ಪ್ರಸಾರವಾಗುತ್ತಿದೆ. ಇದು ಅಪ್ಪನ ಕನಸನ್ನು ಕಾಣುತ್ತಿರುವ ಹುಡುಗಿಯೊಬ್ಬಳ ಕತೆ. ಅಪ್ಪನ ಪ್ರೀತಿ ಕಾಣಲು ಬಯಸಿದ ಮಗಳೇ, ಸಾಕು ಅಪ್ಪನ ಸಾಲ ತೀರಿಸೋ ಪರಿಸ್ಥಿತಿ ಬರುತ್ತೆ.

    MORE
    GALLERIES

  • 28

    Antarapata: ದುರಹಂಕಾರಿ ಸಮೀರಾಗೆ ಆರಾಧನಾ ಸವಾಲು! ಕೈಯಲ್ಲಿ ಕೆಲಸವಿಲ್ಲದ ಹುಡುಗಿ ದೊಡ್ಡ ಕಂಪನಿ ಕಟ್ತಾಳಾ?

    ಆರಾಧನಾ ಮನೆ ಕಷ್ಟ ನಿಭಾಯಿಸಲು ಕೆಲಸ ಹುಡುಕುತ್ತಿರುತ್ತಾಳೆ. ಕೊನೆಗೂ ಆರಾಧನಾಗೆ ಒಂದು ಕೆಲಸ ಸಿಕ್ಕಿದೆ. ಆ ಕಂಪನಿ ಬಾಸ್ ಸಮೀರಾ ಅಂತ. ತುಂಬಾ ಸ್ಟ್ರಿಕ್ಟ್ ಲೇಡಿ ಬಾಸ್. ಹೇಳಿದ ಕೆಲಸ ತಕ್ಷಣ ಆಗಬೇಕು. ಆ ಪಾತ್ರವನ್ನು ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ತುಂಬಾ ಚೆನ್ನಾಗಿ ಮಾಡಿದ್ದಾರೆ.

    MORE
    GALLERIES

  • 38

    Antarapata: ದುರಹಂಕಾರಿ ಸಮೀರಾಗೆ ಆರಾಧನಾ ಸವಾಲು! ಕೈಯಲ್ಲಿ ಕೆಲಸವಿಲ್ಲದ ಹುಡುಗಿ ದೊಡ್ಡ ಕಂಪನಿ ಕಟ್ತಾಳಾ?

    ಸಮೀರಾ ಆರಾಧನಾಗೆ ಒಂದು ಮದುವೆ ಇವೆಂಟ್ ಜವಾಬ್ದಾರಿ ವಹಿಸಿರುತ್ತಾಳೆ. ಮದುವೆ ಮನೆಯವರು ಹೇಳಿದ್ದೇ ಒಂದು ಪ್ಲ್ಯಾನ್, ಸಮೀರಾ ಹೇಳಿದ್ದೇ ಇನ್ನೊಂದು ಪ್ಲ್ಯಾನ್. ಆರಾಧನಾ ಬಾಸ್ ಹೇಳಿದ ರೀತಿ ಡೆಕೊರೇಶನ್ ಮಾಡಿಸಿರುತ್ತಾಳೆ.

    MORE
    GALLERIES

  • 48

    Antarapata: ದುರಹಂಕಾರಿ ಸಮೀರಾಗೆ ಆರಾಧನಾ ಸವಾಲು! ಕೈಯಲ್ಲಿ ಕೆಲಸವಿಲ್ಲದ ಹುಡುಗಿ ದೊಡ್ಡ ಕಂಪನಿ ಕಟ್ತಾಳಾ?

    ಮದುವೆ ಮನೆಯವರು ಬಂದು ಕೇಳಿದಾಗ, ಸಮೀರಾ ತನ್ನ ತಪ್ಪನ್ನು ಆರಾಧನ ಮೇಲೆ ಹಾಕಿ ಬಾಯಿಗೆ ಬಂದಂತೆ ಬೈಯ್ತಾಳೆ. ಆಗ ಆರಾಧನಾ ಸುಮ್ಮನಿರುತ್ತಾಳೆ. ನಂತರ ಸಮೀರಾ ಬಂದು ಆಕೆಯನ್ನು ಸಮಾಧಾನ ಮಾಡ್ತಾಳೆ.

    MORE
    GALLERIES

  • 58

    Antarapata: ದುರಹಂಕಾರಿ ಸಮೀರಾಗೆ ಆರಾಧನಾ ಸವಾಲು! ಕೈಯಲ್ಲಿ ಕೆಲಸವಿಲ್ಲದ ಹುಡುಗಿ ದೊಡ್ಡ ಕಂಪನಿ ಕಟ್ತಾಳಾ?

    ಈ ರೀತಿ ಒಬ್ಬರ ಕನಸಿಗೆ ಬೆಂಕಿ ಹಚ್ಚಿ ಬ್ಯುಸಿನೆಸ್ ಮಾಡೋ ನಿಮ್ಮ ಈ ಗುಣ ನನಗೆ ಇಷ್ಟ ಆಗಲಿಲ್ಲ. ಯಾಕೆ ಈ ರೀತಿ ಮೋಸ ಮಾಡ್ತೀರಿ ಎಂದು ಆರಾಧನಾ ಸಮೀರಾಳನ್ನು ಪ್ರಶ್ನೆ ಮಾಡಿದ್ದಾಳೆ. ಅದಕ್ಕೆ ಸಮೀರಾ ಕೋಪಗೊಂಡಿದ್ದಾಳೆ.

    MORE
    GALLERIES

  • 68

    Antarapata: ದುರಹಂಕಾರಿ ಸಮೀರಾಗೆ ಆರಾಧನಾ ಸವಾಲು! ಕೈಯಲ್ಲಿ ಕೆಲಸವಿಲ್ಲದ ಹುಡುಗಿ ದೊಡ್ಡ ಕಂಪನಿ ಕಟ್ತಾಳಾ?

    ಇನ್ನೊಬ್ಬರ ಕನಸಿನ ಬಗ್ಗೆ ಯೋಚನೆ ಮಾಡಿದ್ರೆ, ನಾನು ನಿನ್ನ ತರ ಉದ್ಯೋಗಿ ಆಗಿರ್ತಿದ್ದೆ. ನಿನ್ನ ಬಳಿ ಬುದ್ಧಿ ಹೇಳಿಸಿಕೊಳ್ಳುವ ಕರ್ಮ ನನಗಿಲ್ಲ. ನೀನೊಬ್ಬ ಟ್ರೇನಿ ಎನ್ನುವುದನ್ನು ಮರೆಯಬೇಡ ಎನ್ನುತ್ತಾಳೆ. ಅಲ್ಲದೇ ಆರಾಧನಾಳನ್ನು ಕೆಲಸದಿಂದ ತೆಗೆದು ಹಾಕ್ತಾಳೆ.

    MORE
    GALLERIES

  • 78

    Antarapata: ದುರಹಂಕಾರಿ ಸಮೀರಾಗೆ ಆರಾಧನಾ ಸವಾಲು! ಕೈಯಲ್ಲಿ ಕೆಲಸವಿಲ್ಲದ ಹುಡುಗಿ ದೊಡ್ಡ ಕಂಪನಿ ಕಟ್ತಾಳಾ?

    ಅದಕ್ಕೆ ಆರಾಧನಾ, ನೀವೇನು ನನ್ನ ಕೆಲಸದಿಂದ ತೆಗೆದು ಹಾಕುವುದು, ನಾನೇ ಬಿಟ್ಟು ಹೋಗ್ತೇನೆ. ಮೋಸ ಮಾಡದೇ ಬ್ಯುಸಿನೆಸ್ ಹೇಗೆ ಮಾಡುವುದು ಅಂತ ತೋರಿಸುತ್ತೇನೆ. ದೊಡ್ಡ ಕಂಪನಿ ಕಟ್ತೇನೆ. ಆಗ ಮೀಟ್ ಆಗೋಣ ಎಂದು ಸಮೀರಾಗೆ ಸವಾಲ್ ಹಾಕಿ ಹೋಗಿದ್ದಾಳೆ.

    MORE
    GALLERIES

  • 88

    Antarapata: ದುರಹಂಕಾರಿ ಸಮೀರಾಗೆ ಆರಾಧನಾ ಸವಾಲು! ಕೈಯಲ್ಲಿ ಕೆಲಸವಿಲ್ಲದ ಹುಡುಗಿ ದೊಡ್ಡ ಕಂಪನಿ ಕಟ್ತಾಳಾ?

    ಸಮೀರಾಗೆ ಸವಾಲು ಹಾಕಿದಂತೆ ದೊಡ್ಡ ಕಂಪನಿ ಕಟ್ಟಿ ತೋರಿಸುತ್ತಾಳಾ ಆರಾಧನಾ? ಮನೆ ಬಾಡಿಗೆ ಕಟ್ಟೋಕೆ ಹಣವಿಲ್ಲದೇ ಪರದಾಡುತ್ತಿರುವವಳು ದೊಡ್ಡ ಕಂಪನಿ ಹೇಗೆ ಕಟ್ತಾಳೆ ಅನ್ನುವುದೇ ಸವಾಲು. ಮುಂದೇನಾಗುತ್ತೆ ಅಂತ ನೋಡೋಕೆ ಅಂತರಪಟ ಧಾರಾವಾಹಿ ನೋಡಬೇಕು.

    MORE
    GALLERIES