ಚಿರಂಜೀವಿ ಸರ್ಜಾರಿಂದ ಬಾಲಸುಬ್ರಹ್ಮಣ್ಯಂವರೆಗೆ: ಈ ವರ್ಷ ಮರೆಯಾದ ಕಲಾವಿದರು
2020 ನಿಜಕ್ಕೂ ಆಘಾತಕಾರಿ ವರ್ಷ ಎಂದರೇ ತಪ್ಪಲ್ಲ. ಒಂದು ಕಡೆ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದರೆ, ಮತ್ತೊಂದು ಕಡೆ ಚಿತ್ರರಂಗದ ಕಲಾವಿದರು ಹಠಾತ್ ನಿಧನ ಅಭಿಮಾನಿಗಳ ಮನಸ್ಸನ್ನು ಘಾಸಿಗೊಳಿಸುತ್ತಿದೆ. ಕಿರಿಯ ವಯಸ್ಸಿನಲ್ಲಿಯೇ ಚಿರು ಮರೆಯಾದ ದುಃಖದ ಹಿಂದೆಯೇ ಸಾಲು ಸಾಲಾಗಿ ಚಿತ್ರರಂಗದ ನಟರು ಇಹಲೋಕ ತ್ಯಜಿಸುತ್ತಿದ್ದಾರೆ. ಇಂದು ಸಂಗೀತ ದಿಗ್ಗಜ್ಜ ಎಸ್ಪಿ ಬಾಲಸುಬ್ರಹ್ಮಣ್ಯ ಕೂಡ ನಿಧನಹೊಂದಿದ್ದು, ಅಭಿಮಾನಿಗಳ ನೋವು ಹೆಚ್ಚಿಸಿದೆ.
ಜೂನ್ 7ರಂದು ಹೃದಯಾಘಾತದಿಂದ ನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿದರು. ಈ ಸುದ್ದಿ ಇಡೀ ಚಿತ್ರರಂಗ ಸೇರಿದಂತೆ ಅವರ ಅಭಿಮಾನಿ ಬಳಗ ನಂಬದಷ್ಟು ಶಾಕ್ ನೀಡಿತ್ತು
2/ 8
ಚಿರು ಸರ್ಜಾ ನಿಧನ ಹೊಂದಿ ಒಂದು ವಾರಕ್ಕೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡರು. ಅವರ ಈ ಕಟು ನಿರ್ಧಾರಕ್ಕೆ ಕಾರಣ ಏನೆಂಬ ಕುರಿತು ತನಿಖೆ ನಡೆಯುತ್ತಲೆ ಇದೆ.
3/ 8
ತಮ್ಮ ಹಾಸ್ಯದ ಹೊನಲಿನ ಮೂಲಕ ಕನ್ನಡ ಪ್ರೇಕ್ಷಕರನ್ನು ರಂಜಿಸಿದ್ದ ಬುಲೆಟ್ ಪ್ರಕಾಶ್ ಆಗಸ್ಟ್ 6ರಂದು ಅನಾರೋಗ್ಯದಿಂದ ನಿಧನರಾದರು.
4/ 8
ಕನ್ನಡ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಹೊಂದಿದ್ದ ಮೇಬಿನಾ ಮೈಕೆಲ್ ಮೇ 27ರಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು.
ಎರಡು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆ ವಿರುದ್ಧ ಹೋರಾಡುತ್ತಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಎಪ್ರಿಲ್ 30ರಂದು ಇಹಲೋಕ ತ್ಯಜಿಸಿದರು.
7/ 8
ಜೂನ್ ಮೊದಲ ದಿನವೇ ಬಾಲಿವುಡ್ಗೆ ಮತ್ತೊಂದು ಆಘಾತಕಾರಿ ಸುದ್ದಿ ಕಾದಿತ್ತು. ದಬಂಗ್ ಖ್ಯಾತಿಯ ಸಂಗೀತ ನಿರ್ದೇಶಕ ವಾಜಿದ್ ಖಾನ್ ಕಿಡ್ನಿ ವೈಫಲ್ಯದಿಂದ 42ನೇ ವಯಸ್ಸಿನಲ್ಲೇ ಕೊನೆಯುಸಿರೆಳೆದರು.
8/ 8
ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಇಂದು (ಸೆ.25) ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.