Chiranjeevi-RRR: ಆಸ್ಕರ್ ಪ್ರಶಸ್ತಿ ವಿಜೇತರಿಗೆ ಚಿರಂಜೀವಿ ಸನ್ಮಾನ! ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಟಾಲಿವುಡ್ ದಿಗ್ಗಜರು

Naatu Naatu Oscar Winning Team: ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ RRR ತಂಡಕ್ಕೆ ಸನ್ಮಾನ ಮಾಡಿದ್ದಾರೆ. ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಗೆದ್ದ ತಂಡವನ್ನು ಅಭಿನಂದಿಸಿದ್ದಾರೆ. ಇದೇ ವೇಳೆ ಟಾಲಿವುಡ್ ದಿಗ್ಗಜರೆಲ್ಲಾ ಒಂದೆಡೆ ಸೇರಿ ಸಂಭ್ರಮಿಸಿದ್ದಾರೆ.

First published:

  • 18

    Chiranjeevi-RRR: ಆಸ್ಕರ್ ಪ್ರಶಸ್ತಿ ವಿಜೇತರಿಗೆ ಚಿರಂಜೀವಿ ಸನ್ಮಾನ! ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಟಾಲಿವುಡ್ ದಿಗ್ಗಜರು

    ಟಾಲಿವುಡ್ನ RRR ಸಿನಿಮಾ ಆಸ್ಕರ್ ಪ್ರಶಸ್ತಿ ಗೆದ್ದು ಭಾರತಕ್ಕೆ ಹೆಮ್ಮೆ ತಂದುಕೊಟ್ಟಿದೆ. ನಾಟು ನಾಟು ಹಾಡು ಪ್ರಶಸ್ತಿ ಗೆಲ್ಲುತ್ತಿದ್ದಂತೆ ಇಡೀ ದೇಶವೇ ಸಂಭ್ರಮಿಸಿದೆ. ಇದೀಗ ಟಾಲಿವುಡ್ ಸೆಲೆಬ್ರಿಟಿಗಳು ಖುಷಿಯನ್ನು ಸೆಲೆಬ್ರೇಟ್ ಮಾಡಿದ್ದಾರೆ.

    MORE
    GALLERIES

  • 28

    Chiranjeevi-RRR: ಆಸ್ಕರ್ ಪ್ರಶಸ್ತಿ ವಿಜೇತರಿಗೆ ಚಿರಂಜೀವಿ ಸನ್ಮಾನ! ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಟಾಲಿವುಡ್ ದಿಗ್ಗಜರು

    ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಟು ನಾಟು ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಂತರಾಷ್ಟ್ರೀಯ ವೇದಿಕೆಯಲ್ಲಿ ಬರಹಗಾರ ಚಂದ್ರಬೋಸ್ ಮತ್ತು ಸಂಗೀತ ನಿರ್ದೇಶಕ ಕೀರವಾಣಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ರು.

    MORE
    GALLERIES

  • 38

    Chiranjeevi-RRR: ಆಸ್ಕರ್ ಪ್ರಶಸ್ತಿ ವಿಜೇತರಿಗೆ ಚಿರಂಜೀವಿ ಸನ್ಮಾನ! ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಟಾಲಿವುಡ್ ದಿಗ್ಗಜರು

    RRR ಚಿತ್ರದಲ್ಲಿನ ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿರುವುದಕ್ಕೆ ಹಲವು ಸಿನಿ ಗಣ್ಯರು ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗಷ್ಟೇ ಟಾಲಿವುಡ್​ನ ದಿಗ್ಗಜರೆಲ್ಲಾ ಒಟ್ಟಿಗೆ ಸೇರಿದ್ದು ತೆಲುಗು ಸಿನಿಮಾಗೆ ಆಸ್ಕರ್ ಸಿಕ್ಕ ಖುಷಿಯನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 48

    Chiranjeevi-RRR: ಆಸ್ಕರ್ ಪ್ರಶಸ್ತಿ ವಿಜೇತರಿಗೆ ಚಿರಂಜೀವಿ ಸನ್ಮಾನ! ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಟಾಲಿವುಡ್ ದಿಗ್ಗಜರು

    ಈ ಸಂದರ್ಭದಲ್ಲಿ ಮೆಗಾಸ್ಟಾರ್ ಚಿರಂಜೀವಿ RRR ತಂಡ ಮತ್ತು ನಾಟು ನಾಟು ಹಾಡಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಸನ್ಮಾನ ಮಾಡಿ ಅಭಿನಂದಿಸಿದ್ದಾರೆ. ಕಾರ್ಯಕ್ರಮದಲ್ಲಿ ಚಿರಂಜೀವಿ-ಸುರೇಖಾ ದಂಪತಿ ಆಸ್ಕರ್ ಪ್ರಶಸ್ತಿ ವಿಜೇತರಿಗೆ ಶಾಲು ಹೊದಿಸಿ ಗೌರವ ಸಲ್ಲಿಸಿದ್ರು.

    MORE
    GALLERIES

  • 58

    Chiranjeevi-RRR: ಆಸ್ಕರ್ ಪ್ರಶಸ್ತಿ ವಿಜೇತರಿಗೆ ಚಿರಂಜೀವಿ ಸನ್ಮಾನ! ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಟಾಲಿವುಡ್ ದಿಗ್ಗಜರು

    ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಚಿರಂಜೀವಿ ಹಂಚಿಕೊಂಡಿದ್ದಾರೆ. ಸ್ಕರ್ ಪ್ರಶಸ್ತಿ ವಿಜೇತರನ್ನು ಸ್ನೇಹಿತರ ಸಮ್ಮುಖದಲ್ಲಿ ಸನ್ಮಾನಿಸಿದ್ದು ನಿಜವಾದ ಸಂಭ್ರಮಾಚರಣೆಯಂತೆ ಕಾಣಿಸಿದೆ. ಭಾರತೀಯ ಚಿತ್ರರಂಗಕ್ಕಾಗಿ ತೆಲುಗು ಸಿನಿ ಮಂದಿ ತಂದು ಕೊಟ್ಟ ಈ ಪ್ರಶಸ್ತಿ ಇತಿಹಾಸದಲ್ಲಿ ಉಳಿಯುತ್ತದೆ ಎಂದು ಚಿರಂಜೀವಿ ಬರೆದುಕೊಂಡಿದ್ದಾರೆ. ಈ ಫೋಟೋಗಳು ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿವೆ.

    MORE
    GALLERIES

  • 68

    Chiranjeevi-RRR: ಆಸ್ಕರ್ ಪ್ರಶಸ್ತಿ ವಿಜೇತರಿಗೆ ಚಿರಂಜೀವಿ ಸನ್ಮಾನ! ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಟಾಲಿವುಡ್ ದಿಗ್ಗಜರು

    ಈ ಕಾರ್ಯಕ್ರಮದಲ್ಲಿ ಚಿರಂಜೀವಿ ದಂಪತಿ ಜೊತೆಗೆ ನಾಗಾರ್ಜುನ-ಅಮಲಾ ದಂಪತಿ, ರಾಜಮೌಳಿ-ರಾಮ ದಂಪತಿ, ವಿಕ್ಟರಿ ವೆಂಕಟೇಶ್, ವಿಜಯ್ ದೇವರಕೊಂಡ, ಶ್ರೀಕಾಂತ್, ಅಕ್ಕಿನೇನಿ ನಾಗ ಚೈತನ್ಯ, ಅಖಿಲ್, RRR ನಿರ್ಮಾಪಕ ದಾನಯ್ಯ ಮುಂತಾದವರು ಭಾಗವಹಿಸಿದ್ದರು.

    MORE
    GALLERIES

  • 78

    Chiranjeevi-RRR: ಆಸ್ಕರ್ ಪ್ರಶಸ್ತಿ ವಿಜೇತರಿಗೆ ಚಿರಂಜೀವಿ ಸನ್ಮಾನ! ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಟಾಲಿವುಡ್ ದಿಗ್ಗಜರು

    ಲಾಸ್ ಏಂಜಲೀಸ್​ನಲ್ಲಿ ನಡೆದ 95ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ನಾಟು ನಾಟು ಹಾಡು ಇತಿಹಾಸ ಸೃಷ್ಟಿಸಿದೆ. ನಾಟು ನಾಟು ಹಾಡು ಇತರ 4 ಸಿನಿಮಾ ಹಾಡುಗಳ ವಿರುದ್ಧ ಸ್ಪರ್ಧಿಸಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಬಗ್ಗೆ ಇಡೀ ಭಾರತ ಹೆಮ್ಮೆಪಡುತ್ತಿದೆ

    MORE
    GALLERIES

  • 88

    Chiranjeevi-RRR: ಆಸ್ಕರ್ ಪ್ರಶಸ್ತಿ ವಿಜೇತರಿಗೆ ಚಿರಂಜೀವಿ ಸನ್ಮಾನ! ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಟಾಲಿವುಡ್ ದಿಗ್ಗಜರು

    ಪ್ಯಾನ್ ಇಂಡಿಯಾ ಚಲನಚಿತ್ರ RRR ನಲ್ಲಿ ಈ ನಾಟು ನಾಟು ಹಾಡಿಗೆ ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ರಾಹುಲ್ ಸಿಪ್ಲಿಗಂಜ್ ಮತ್ತು ಕಾಲ ಬೈರವ ಹಾಡಿದ್ದಾರೆ. ಚಂದ್ರಬೋಸ್ ಸಾಹಿತ್ಯ ಬರೆದಿದ್ದಾರೆ. ಈ ಹಾಡು ಬಿಡುಗಡೆಯಾದಾಗಿನಿಂದ ಟ್ರೆಂಡಿಂಗ್ ಆಗಿದೆ. ಇದೀಗ ಆಸ್ಕರ್ ಪ್ರಶಸ್ತಿ ಗೆದ್ದು ಹೊಸ ದಾಖಲೆ ನಿರ್ಮಿಸಿದೆ.

    MORE
    GALLERIES