ಬಾಲಿವುಡ್ ನಟಿ ಛಾವಿ ಮಿತ್ತಲ್ ಅವರು ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಸ್ತನ ಕ್ಯಾನ್ಸರ್ ಟ್ರೀಟ್ಮೆಂಟ್ ಪಡೆದುಕೊಂಡಿದ್ದಾರೆ. ಸರ್ಜರಿ ನಂತರ ನಟಿ ಯಶಸ್ವಿಯಾಗಿ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿದ್ದಾರೆ.
2/ 10
ಬಹಳಷ್ಟು ಜನರಿಗೆ ಪ್ರೇರಣೆಯಾದ ನಟಿ ತಮ್ಮ ಈ ಸ್ತನ ಕ್ಯಾನ್ಸರ್ ಹೋರಾಟದ ಸಂಪೂರ್ಣ ಜರ್ನಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
3/ 10
ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಸ್ಟೋರಿ ಹಂಚಿಕೊಂಡ ನಟಿ ಸರ್ಜರಿ ನಡೆದು ಹಲವಾರು ತಿಂಗಳು ಕಳೆದಿದ್ದರೂ ಈಗಲೂ ಟ್ರೋಲ್ ಆಗುತ್ತಿದ್ದಾರೆ.
4/ 10
ನಟಿ ಛಾವಿ ಅವರು ಇತ್ತೀಚೆಗೆ ಫ್ಯಾಮಿಲಿಯಾಗಿ ದುಬೈಗೆ ಹೋಗಿದ್ದಾರೆ. ದುಬೈ ಟ್ರಿಪ್ನಿಂದ ಬಿಕಿನಿ ಫೋಟೋಸ್ ಶೇರ್ ಮಾಡಿದ್ದರು ನಟಿ. ಈ ಫೋಟೋ ನೋಡಿದ ಜನರು ನಟಿಯ ದೇಹದ ಬಗ್ಗೆ ಮಾತನಾಡಿದ್ದಾರೆ. ಒಬ್ಬ ಇನ್ಸ್ಟಾಗ್ರಾಮ್ ಬಳಕೆದಾರರಂತೂ ಸ್ತನ ಕ್ಯಾನ್ಸರ್ನಲ್ಲಿ ಸ್ತನ ಕಟ್ ಮಾಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
5/ 10
ಈ ಟ್ರೋಲ್ಗೆ ಉತ್ತರಿಸಿ ನಟಿ ಹೌದು, ಇಂಥಹ ಇನ್ಸೆನ್ಸಿಟಿವಿಟಿ ಈಗಲೂ ನಡೆಯುತ್ತದೆ. ನಾನು ಇತ್ತೀಚೆಗೆ ಕೆಲವು ವೆಕೇಷನ್ ಫೋಟೋಸ್ ಹಾಗೂ ರೀಲ್ಸ್ ಶೇರ್ ಮಾಡಿದ್ದೆ. ಈ ಕಮೆಂಟ್ ನನ್ನ ಗಮನ ಸೆಳೆಯಿತು. ನನ್ನ ದೇಹದ ಭಾಗ ಇಲ್ಲಿ ವಸ್ತುವಿನಂತೆ ಚರ್ಚೆಯಾಗುತ್ತಿದೆ.
6/ 10
ಸ್ವಲ್ಪ ಸೆನ್ಸಿಟಿವಿಟಿ ಇಟ್ಟುಕೊಂಡು ಮಾತನಾಡಿ ಎಂದು ಜನರಿಗೆ ಸಲಹೆ ನೀಡಿದ್ದಾರೆ ನಟಿ. ಈ ಘಟನೆ ಬಗ್ಗೆ ನಿಮ್ಮ ಕುತೂಹಲ ಅರ್ಥವಾಗುತ್ತದೆ. ಸ್ವಲ್ಪ ಸೌಜನ್ಯದಿಂದ ಮಾತನಾಡಿದರೆ ಮಾತುಗಳು ಅಷ್ಟು ನೋಯಿಸಲಾರವು ಎಂದು ನಿಮಗನಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
7/ 10
ಸೆಲೆಬ್ರಿಟಿಗಳೂ ಮನುಷ್ಯರೇ. ಸಾಮಾನ್ಯ ಜನರಂತೆ ಅವರಿಗೂ ಭಾವನೆಗಳಿವೆ. ಉಳಿದವರಂತೆಯೇ ನಮಗೂ ಕ್ಯಾನ್ಸರ್ ಬರುತ್ತದೆ. ಅವರು ಬದುಕುಳಿಯುವುದು ಅಥವಾ ಸಾಯುವುದು ಉಳಿದವರಂತೆಯೇ. ಹಾಗಾಗಿ ಮಾನಸಿಕ ಹಾಗೂ ದೈಹಿಕವಾಗಿ ಈ ಕಷ್ಟದ ಹೋರಾಟ ಮಾಡುವ ಯಾವುದೇ ಪೇಷೆಂಟ್ ಬಳಿ ಈ ರೀತಿ ಮಾತನಾಡಬಾರದು ಎಂದಿದ್ದಾರೆ.
8/ 10
ಕ್ಯಾನ್ಸರ್ ತಗುಲಿರುವ ಸ್ತನದ ಗಡ್ಡೆಯನ್ನು ತೆಗೆದು ಹಾಕಲಾಗುತ್ತದೆ. ಇಡೀ ಸ್ತನವನ್ನು ಕತ್ತರಿಸುವುದಿಲ್ಲ. ಆದರೆ ಕ್ಯಾನ್ಸರ್ ಇಡೀ ಹರಡಿದ್ದಾಗ ಹಾಗೆ ಮಾಡಬೇಕಾಗುತ್ತದೆ. ಇದು ಕ್ಯಾನ್ಸರ್ ಮೊದಲನೇ ಸ್ಟೇಜ್ನಲ್ಲಿದ್ದಾಗ ಸಂಭವಿಸುವುದಿಲ್ಲ. ಹಾಗಾಗಿ ಇದನ್ನು ಚೆಕ್ ಮಾಡುತ್ತಿರುವುದು ಅಗತ್ಯ ಎಂದು ಸಲಹೆ ಕೊಟ್ಟಿದ್ದಾರೆ.
9/ 10
ಎದೆಯ ಭಾಗ ಮೊದಲು ಹೇಗಿತ್ತೋ ಹಾಗೆಯೇ ಕಾಣುವಂತೆ ಮಾಡಲು ಸರ್ಜರಿ ಮಾಡಲಾಗಿತ್ತು. ಬೆನ್ನಿನ ಕಳೆಗಿನ ಭಾಗದ ಹೆಚ್ಚಿನ ಮಸಲ್ ತೆಗೆದು ಈ ಚಿಕಿತ್ಸೆ ಮಾಡಲಾಗಿತ್ತು ಎಂದಿದ್ದಾರೆ.
10/ 10
ನಟಿ ಟ್ರೋಲ್ಗೆ ಖಡಕ್ ಆಗಿ ಉತ್ತರಿಸಿದರೂ ನಂತರ ಅಲ್ಲಿ ಕೇಳಲಾದ ಸಂದೇಹದ ಬಗ್ಗೆ ತಾಳ್ಮೆಯಿಂದ ಉತ್ತರಿಸಿದ ರೀತಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.