Chandan Shetty and Niveditha Gowda Wedding: ಬಿಗ್ ಬಾಸ್ ಜೋಡಿ ಚಂದನ್ ಗೊಂಬೆ ನಿವೇದಿತಾರ ಇಂದು ಬೆಳಿಗ್ಗೆ ನವ ದಾಂಪತ್ಯಕ್ಕೆ ಕಾಲಿಸಿರಿಸಿದ್ದಾರೆ. ಮೈಸೂರಿನ ಹಿನಕಲ್ ಸ್ಪೆಕ್ಟ್ರಾ ಕಲ್ಯಾಣ ಮಂಟಪದಲ್ಲಿ ಚಂದನ್ ನಿವೇದಿತಾರ ವಿವಾಹ ಅದ್ಧೂರಿಯಾಗಿ ನೆರವೇರಿತು. ಕಲ್ಯಾಣ ಮಂಟಪದ ಹೊರ ಆವರಣದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಹೂವಿನ ಮಂಟಪದಲ್ಲಿ ಚಂದನ್ ನಿವೇದಿತಾರಿಗೆ ಮಾಂಗಲ್ಯ ಧಾರಣೆ ಮಾಡಿದರು. ಬೆಳಿಗ್ಗೆ 8.15 ರಿಂದ 9 ಗಂಟೆ ರವರೆಗಿನ ಮೀನಾ ಲಗ್ನದಲ್ಲಿ ಮಾಂಗಲ್ಯಧಾರಣೆ ನಡೆಯಿತು. ನೂತನ ದಂಪತಿಗೆ ಬಂಧುಗಳು ಹಾಗೂ ಸ್ನೇಹಿತರು ಧಾರೆ ಎರೆದು ಹಾರೈಸಿದ್ದಾರೆ.