Chandan Kumar-Kavitha Gowda: ಎಷ್ಟು ಸರಳವಾಗಿ ನಡೆಯಿತು ಗೊತ್ತಾ ಚಂದನ್ ಕುಮಾರ್-ಕವಿತಾ ವಿವಾಹ..!
Chandan Kumar-Kavitha Gowda Wedding Photos: ಏ.1ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಕಳೆದ ಶುಕ್ರವಾರ ಸರಳವಾಗಿ ಮನೆಯಲ್ಲೇ ಸಪ್ತಪದಿ ತುಳಿದಿದ್ದಾರೆ. ಶಾಸ್ತ್ರೋಕ್ತವಾಗಿ ಮದುವೆಯಾಗಿರುವ ಈ ಜೋಡಿ ಆಡಂಬರಕ್ಕೆ ಬ್ರೇಕ್ ಹಾಕಿದ್ದು, ಸರಳವಾಗಿ ವಿವಾಹವಾಗಿದ್ದಾರೆ. ತಮ್ಮ ಮದುವೆ ಎಷ್ಟು ಸರಳವಾಗಿ ಆಯಿತು ಎಂದು ಚಂದನ್ ಬರೆದುಕೊಂಡಿದ್ದಾರೆ. (ಚಿತ್ರಗಳು ಕೃಪೆ: ಚಂದನ್ ಕುಮಾರ್ ಇನ್ಸ್ಟಾಗ್ರಾಂ ಖಾತೆ)
ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ಜೋಡಿ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಕಳೆದ ಶುಕ್ರವಾರ ನವಜೀವನಕ್ಕೆ ಕಾಲಿಟ್ಟಿದ್ದಾರೆ.
2/ 9
ಸಹಕಾರ ನಗರದಲ್ಲಿರುವ ಚಂದನ್ ಅವರ ಮನೆಯಲ್ಲಿ ಈ ಜೋಡಿ ಮದುವೆ ನಡೆದಿದೆ.
3/ 9
ಚಂದನ್ ಹಾಗೂ ಕವಿತಾ ಅವರ ಮದುವೆಗಯಲ್ಲಿ ಅವರ ಕೆಲ ಸ್ನೇಹಿತರು ಹಾಗೂ ಮನೆಯವರು ಮಾತ್ರ ಭಾಗಿಯಾಗಿದ್ದರು.
4/ 9
ಚಂದನ್ ತಮ್ಮ ಮದುವೆ ಎಷ್ಟು ಸರಳವಾಗಿ ನಡೆಯಿತು ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
5/ 9
ಪ್ರೀ ವೆಡ್ಡಿಂಗ್ ಶೂಟ್ ಇಲ್ಲ, ಅದ್ಧೂರಿ ಶಾಪಿಂಗ್ ಇಲ್ಲ, ಲಗ್ನಪತ್ರಿಕೆ ಇಲ್ಲ, ಡಿಸೈನರ್ ಡ್ರೆಸ್ಗಳಿಲ್ಲ, ಆರತಕ್ಷತೆ ಇಲ್ಲ, ಬ್ಯಾಚುಲರ್ ಪಾರ್ಟಿಗಳಿಲ್ಲದೆ ನಡೆದ ಮದುವೆ ಶಾಸ್ತ್ರೋಕ್ತವಾಗಿ ನಡೆಯಿತು ಎಂದು ಖುಷಿಯಿಂದ ಹಂಚಿಕೊಂಡಿದ್ದಾರೆ ಚಂದನ್.
6/ 9
ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಅವರ ವಿವಾಹದ ಫೋಟೋಗಳು ಸದ್ಯ ವೈರಲ್ ಆಗುತ್ತಿವೆ.
7/ 9
ಚಂದನ್ ಕುಮಾರ್ ಹಾಗೂ ಕವಿತಾ ಮದುವೆಗೆ ಕಿರಿಕ್ ಕೀರ್ತಿ ಸೇರಿದಂತೆ ಇನ್ನು ಕೆಲವು ಕಿರುತೆರೆ ಕಲಾವಿದರು ಭಾಗಿಯಾಗಿದ್ದರು.