ಸಾಮಾನ್ಯವಾಗಿ ತೆರೆ ಮೇಲೆ ಇಂಟಿಮೇಟ್ ದೃಶ್ಯಗಳಲ್ಲಿ ಹಾಗೂ ಚುಂಬನದ ಸೀನ್ಗಳಲ್ಲಿ ಕಾಣಿಸಿಕೊಳ್ಳುವ ನಟ-ನಟಿಯರ ಪರಿಸ್ಥಿತಿ ಹೇಳುವಷ್ಟು ಸುಲಭವಾಗಿರುವುದಿಲ್ಲ. ಸುತ್ತಲ್ಲೂ ಇರುವ ಶೂಟಿಂಗ್ ತಂಡದ ಸದಸ್ಯರ ಮುಂದೆ ಇಂತಹ ದೃಶ್ಯಗಳಲ್ಲಿ ನಟಿಸುವಾದ ಎಂತಹವರಿಗೂ ಮುಜುಗರವಾಗುತ್ತದೆಯಂತೆ. ಈ ಬಗ್ಗೆ ಸಾಕಷ್ಟು ಮಂದಿ ತುಂಬಾ ಸಲ ಹೇಳಿಕೊಂಡಿದ್ದಾರೆ. ಇಂತಹದ್ದೇ ಅನುಭವ ಕರಿಷ್ಮಾ ಅವರೂ ಎದುರಿಸಿದ್ದರಂತೆ.