ಸ್ಯಾಂಡಲ್ವುಡ್ನ ಕ್ಯೂಟ್ ನಟಿ, ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ರಚಿತಾ ರಾಮ್ ವಿರುದ್ಧ ಮಂಡ್ಯ ಜಿಲ್ಲೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
2/ 7
ಭಾರತೀಯ ಸಂವಿಧಾನ ಹಾಗೂ ಗಣರಾಜ್ಯೋತ್ಸವ ದಿನಕ್ಕೆ ನಟಿ ತಮ್ಮ ಹೇಳಿಕೆಯಲ್ಲಿ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ.
3/ 7
ನಟಿಯ ಹೇಳಿಕೆಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಿ. ಶಿವಲಿಂಗಯ್ಯ ಒತ್ತಾಯಿಸಿದ್ದಾರೆ.
4/ 7
ನಟಿ ತಮ್ಮ ಸಿನಿಮಾ ಪ್ರಚಾರದ ವೇಳೆ ಪ್ರತಿ ವರ್ಷ ಜನವರಿ 26ಕ್ಕೆ ಗಣರಾಜ್ಯೋತ್ಸವ ಆಚರಿಸುತ್ತಿದ್ದೀರಿ. ಈ ಬಾರಿ ಗಣರಾಜ್ಯೋತ್ಸವ ಮರೆತುಬಿಡಿ ಎಂದು ಹೇಳಿದ್ದಾರೆ.
5/ 7
ನಟಿ ಕೊಟ್ಟಿರುವ ಹೇಳಿಕೆ ಸಂವಿಧಾನ ವಿರೋಧಿ ಹೇಳಿಕೆಯಾಗಿದೆ. ಸಂವಿಧಾನ ಜಾರಿಯಾದ ದಿನಕ್ಕೆ ಎಲ್ಲರೂ ಗೌರವ ಸಲ್ಲಿಸಿದರೆ ನಟಿ ಅವಮಾನ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಶಿವಲಿಂಗಯ್ಯ ಆರೋಪಿಸಿದ್ದಾರೆ.
6/ 7
ರಚಿತಾರಾಮ್ ಅವರ ಹೇಳಿಕೆ ದೇಶ ದ್ರೋಹ ಹೇಳಿಕೆಯಾಗಿದ್ದು, ಇವರ ಮೇಲೆ ದೇಶ ದ್ರೋಹ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
7/ 7
ರಚಿತಾ ರಾಮ್ ವಿರುದ್ಧ ಮದ್ದೂರು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.