ವಿಜಯಕಾಂತ್ ಅವರ ಆರೋಗ್ಯದ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ. "ನನ್ನ ಅದ್ಭುತ ಸ್ನೇಹಿತ ಶೀಘ್ರವಾಗಿ ಚೇತರಿಸಿಕೊಳ್ಳಲು ಮತ್ತು ಹಿಂದಿನ ನಾಯಕನಂತೆ ಮತ್ತೊಮ್ಮೆ ಘರ್ಜಿಸುವಂತೆ ದೇವರು ಬಯಸುತ್ತೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ತಮಿಳು ಚಿತ್ರರಂಗದ ನಟ ಹಾಗೂ ಡಿಎಂಡಿಕೆ ಅಧ್ಯಕ್ಷ ವಿಜಯಕಾಂತ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನಿನ್ನೆ ಅವರನ್ನು ಏಕಾಏಕಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ನಾಯಕ ವಿಜಯಕಾಂತ್ ಆರೋಗ್ಯ ವಿಷಮವಾಗಿದೆ ಎಂಬ ಸುದ್ದಿ ಕಾಲಿವುಡ್ ನಲ್ಲಿ ವೈರಲ್ ಆಗಿದೆ.
2/ 7
ವೈದ್ಯರು ವಿಜಯಕಾಂತ್ ಅವರ ಬಲ ಕಾಲಿನ ಬೆರಳನ್ನು ತೆಗೆದಿದ್ದಾರೆ. ವಿಜಯಕಾಂತ್ ಅವರು ಕಳೆದ ಕೆಲವು ವರ್ಷಗಳಿಂದ ತೀವ್ರ ಮಧುಮೇಹದಿಂದ ಬಳಲುತ್ತಿದ್ದಾರೆ. ವೈದ್ಯಕೀಯ ತಪಾಸಣೆಗಾಗಿ ಇತ್ತೀಚೆಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬೆರಳು ಕೊಳೆಯುವ ಸಾಧ್ಯತೆ ಇದ್ದಿದ್ದರಿಂದ ತೆಗೆಯಲಾಗಿದೆ.
3/ 7
ಮತ್ತೊಂದೆಡೆ, ವಿಜಯಕಾಂತ್ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ಮತ್ತು ಕಾರ್ಯಕರ್ತರು ತೀವ್ರ ಚಿಂತಿತರಾಗಿದ್ದಾರೆ. ಈ ಕುರಿತು ಪಕ್ಷವು ಪ್ರಕಟಣೆ ಹೊರಡಿಸಿದೆ. ವಿಜಯಕಾಂತ್ ಸುರಕ್ಷಿತವಾಗಿದ್ದಾರೆ, ಹರಿದಾಡುತ್ತಿರುವ ವದಂತಿಗಳನ್ನು ನಂಬಬೇಡಿ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
4/ 7
ಈ ಹಿಂದೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಿಜಯಕಾಂತ್ ಅವರಿಗೆ ಮತ್ತೊಂದು ಶಸ್ತ್ರ ಚಿಕಿತ್ಸೆ ನಡೆಯುತ್ತಿದೆ ಎನ್ನಲಾಗಿದೆ. ಈ ಸರ್ಜರಿ ಮೂಲಕ ಬಲಗಾಲಿನ ನಾಲ್ಕು ಕಾಲ್ಬೆರಳುಗಳನ್ನು ತೆಗೆದಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
5/ 7
ಈ ಸುದ್ದಿಗೆ ಪ್ರತಿಕ್ರಿಯಿಸಿದ ವಿಜಯಕಾಂತ್ ಪಕ್ಷದ ಸದಸ್ಯರು, ನಾಲ್ಕು ಬೆರಳು ತೆಗೆದಿರುವುದು ಸುಳ್ಳು, ರಕ್ತ ಸಂಚಾರಕ್ಕೆ ಅನುವು ಮಾಡಿಕೊಡಲು ಒಂದು ಬೆರಳನ್ನು ಮಾತ್ರ ತೆಗೆಯಲಾಗಿದೆ ಎಂದು ಹೇಳಿದ್ದಾರೆ.
6/ 7
ವಿಜಯಕಾಂತ್ ಬೇಗ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಕ್ಯಾಪ್ಟನ್ ವಿಜಯಕಾಂತ್ ಆಗಿ ಅವರು ತಮಿಳು ಮಾತ್ರವಲ್ಲದೆ ತೆಲುಗು ಪ್ರೇಕ್ಷಕರಿಗೂ ಚಿರಪರಿಚಿತರು.
7/ 7
ವಿಜಯಕಾಂತ್ ಅವರ ಆರೋಗ್ಯದ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ. "ನನ್ನ ಅದ್ಭುತ ಸ್ನೇಹಿತ ಶೀಘ್ರವಾಗಿ ಚೇತರಿಸಿಕೊಳ್ಳಲು ಮತ್ತು ಹಿಂದಿನ ನಾಯಕನಂತೆ ಮತ್ತೊಮ್ಮೆ ಘರ್ಜಿಸುವಂತೆ ದೇವರಲ್ಲಿ ಬಯಸುತ್ತೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.