2023ರ ಕೇನ್ಸ್ ಫಿಲ್ಮ್ ಫೆಸ್ಟಿವಲ್ ಭರ್ಜರಿಯಾಗಿ ನಡೆಯುತ್ತಿದೆ. ಅನೇಕ ಭಾರತೀಯ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಮಿಂಚುತ್ತಿದ್ದಾರೆ. ನಟಿ ಸಾರಾ ಅಲಿ ಖಾನ್, ಊರ್ವಶಿ ರೌಟೇಲಾ, ಮೃಣಾಲ್ ಠಾಕೂರ್ ಮತ್ತಿತ್ತರು ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವಕ್ಕೆ ಮತ್ತಷ್ಟು ರಂಗು ತುಂಬಿದ್ದಾರೆ. ಒಬ್ಬರಿಗಿಂತ ಒಬ್ಬರು ಬಹಳ ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
ಹೆಮ್ಮೆಯಾಗುತ್ತಿದೆ ಎಂದ ಸಾರಾ: ಸಚಿವ ಎಲ್ ಮುರುಗನ್ ಅವರು ದಿ ಇಂಡಿಯಾ ಪೆವಿಲಿಯನ್ ಅನ್ನು ಉದ್ಘಾಟಿಸಿದ್ದು, ನಟಿ ಸಾರಾ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಫಿಲ್ಮ್ ಫೆಸ್ಟಿವಲ್‌ನಲ್ಲಿ ತಮ್ಮ ದಿನವನ್ನು ಆರಂಭಿಸಿದರು. ಅಷ್ಟೇ ಅಲ್ಲದೇ ವಿಡಿಯೋ ಒಂದರಲ್ಲಿ ಕೇನ್ಸ್ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದಕ್ಕೆ ಭಾರಿ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.
ದೇಸಿ ಉಡುಗೆಯಲ್ಲಿ ಸಾರಾ ಮಿಂಚಿಂಗ್: ಸಾರಾ ಅಲಿ ಖಾನ್ ಕಪ್ಪು ಮತ್ತು ಬಿಳಿಯ ಭಾರತೀಯ ದೇಸಿ ಉಡುಗೆಯಲ್ಲಿ ಕಾಣಿಸಿಕೊಂಡು, ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ವಿನ್ಯಾಸಗೊಳಿಸಿದ ಈ ಉಡುಗೆಗೆ ಸಾರಾ ಉತ್ತಮವಾದ ಜ್ಯುವೆಲ್ಲರಿ ಕೂಡ ಮ್ಯಾಚ್ ಮಾಡಿದ್ದರು. ಸಾರಾ ಅಲಿ ಖಾನ್ ಅವರಿಗೆ ಇದು ಮೊದಲ ಕೇನ್ಸ್ ಚಿತ್ರೋತ್ಸವ ಕಾರ್ಯಕ್ರಮವಾಗಿದ್ದು, ಇಂಟರ್‌ನೆಟ್‌ನಲ್ಲಿ ಸಾರಾ ತೊಟ್ಟಿದ್ದ ಉಡುಗೆಗೆ ಭಾರಿ ಪ್ರಶಂಸೆಗಳು ಹರಿದು ಬರುತ್ತಿವೆ.
ಬ್ಲಾಕ್ ನೆಟೆಡ್ ಡ್ರೆಸ್‌ನಲ್ಲಿ ಮೋಡಿ ಮಾಡಿದ ಮೃಣಾಲ್: ಕೇನ್ಸ್ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ನಟಿ ಮೃಣಾಲ್ ಠಾಕೂರ್, ಬ್ಲಾಕ್ ನೆಟೆಡ್ ಔಟ್‌ಫಿಟ್‌ನಲ್ಲಿ ತೆಗೆಸಿದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಮೃಣಾಲ್ ಕೇನ್ಸ್ ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿದ ಸೀತಾರಾಮ್ ನಟಿ ಹಿಂದೆ ಎಂದು ನನಗೆ ದೊರೆಯದ ಅವಕಾಶ ಈಗ ದೊರೆತಿದೆ. ಕೇನ್ಸ್ ಫಿಲ್ಮ್ ಫೆಸ್ಟಿವಲ್ ಅನುಭವವನ್ನು ಆಸ್ವಾದಿಸಲು ಸಿದ್ಧಳಾಗುತ್ತಿದ್ದೇನೆ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.