ಈ ಫೋಟೋದಲ್ಲಿರುವ ಕನ್ನಡದ ಖ್ಯಾತ ನಟಿಯಾರೆಂದು ಗುರುತಿಸಬಲ್ಲಿರಾ..?
ಯಾರಿಗಾದರೂ ಸಹ ತಮ್ಮ ಬಾಲ್ಯದಲ್ಲಿ ತೆಗೆಸಿಕೊಂಡ ಚಿತ್ರಗಳೆಂದರೆ ತುಂಬಾ ಇಷ್ಟ ಹಾಗೂ ಅದೊಂದು ಸುಂದರವಾದ ನೆನಪುಗಳು. ಅದನ್ನು ಎಲ್ಲರೂ ಜೋಪಾನ ಮಾಡುತ್ತಾರೆ. ಅದಕ್ಕೆ ಯಾವ ಸಿನಿ ತಾರೆಯರೂ ಸಹ ಹೊರತಾಗಿಲ್ಲ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಇತರೆ ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಖ್ಯಾತ ನಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಬಾಲ್ಯದ ಫೋಟೋ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿರುವ ಆ ನಟಿ ಯಾರೆಂದು ಗುರುತಿಸಬಲ್ಲಿರಾ..? (ಚಿತ್ರಗಳು ಕೃಪೆ: ನಟಿಯ ಇನ್ಸ್ಟಾಗ್ರಾಂ ಖಾತೆ)
ಬಾಲ್ಯದ ಸುಂದರ ನೆನಪುಗಳು ಎಂದಿಗೂ ಮಾಸುವುದಿಲ್ಲ. ಅದು ಸಾಮಾನ್ಯರಿರಲಿ... ಸೆಲೆಬ್ರಿಟಿಗಳಿರಲಿ...
2/ 11
ಇಲ್ಲೊಬ್ಬರು ಸ್ಯಾಂಡಲ್ವುಡ್ ನಟಿ ತಮ್ಮ ಶಾಲಾ ದಿನಗಳ ಚಿತ್ರವೊಂದು ಹಂಚಿಕೊಂಡಿದ್ದು, ಮತ್ತೆ ನಾನು ಆ ದಿನಗಳಿಗೆ ಮರಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
3/ 11
ಈ ಚಿತ್ರದಲ್ಲಿರುವ ನಟಿ ಶ್ರದ್ಧಾ ಶ್ರೀನಾಥ್. ತಮ್ಮ ಅಕ್ಕನ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿರುವ ಶ್ರದ್ಧಾ, ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
4/ 11
ನಾನು ಮತ್ತೆ ಅದೇ ಶ್ರದ್ಧಾ ಆಗಬೇಕೆಂದಿದ್ದಾರೆ. ಅಮ್ಮ ನನಗಾಗಿ ಬಟ್ಟೆಗಳನ್ನು ತೆಗೆದಿಡಬೇಕು, ಅಪ್ಪ ನನ್ನ ಫೋಟೋ ತೆಗೆಯಬೇಕೆಂದು ಹೇಳುತ್ತಲೇ ಮನೆಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಈ ನಟಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
5/ 11
ಕೊಹಿನೂರ್ ಸಿನಿಮಾದ ಮೂಲಕ ನಾಯಕಿಯಾದ ಶ್ರದ್ಧಾ ಶ್ರೀನಾಥ್ ಅವರಿಗೆ ಹೆಸರು ತಂದು ಕೊಟ್ಟಿದ್ದು ಯೂಟರ್ನ್ ಚಿತ್ರ.
6/ 11
ಶ್ರದ್ಧಾ ಶ್ರೀನಾಥ್ ಕನ್ನಡದ ಜೊತೆಗೆ ತಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ.
7/ 11
ಸದ್ಯ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ವ್ಯಸ್ತರಾಗಿದ್ದಾರೆ ಈ ನಟಿ.
8/ 11
ಕೃಷ್ಣ ಆ್ಯಂಡ್ ಹಿಸ್ ಲೀಲಾ ಸಿನಿಮಾದ ನಟ ಸಿದ್ಧೂ ಜತೆ ನರುಡಿ ಬ್ರದುಕು ಎಂಬ ತೆಲುಗು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
9/ 11
ಕೃಷ್ಣ ಆ್ಯಂಡ್ ಹಿಸ್ ಲೀಲಾ ಸಿನಿಮಾ ಕೊರೋನಾ ಲಾಕ್ಡೌನ್ ಸಮಯದಲ್ಲೇ ಒಟಿಟಿ ಮೂಲಕ ರಿಲೀಸ್ ಆಯಿತು.
10/ 11
ಶ್ರದ್ಧಾ ಸಿನಿಮಾಗಳಲ್ಲಿ ಸಖತ್ ಬೋಲ್ಡ್ ಹಾಗೂ ಇಂಟಿಮೇಟ್ ದೃಶ್ಯಗಳಲ್ಲೂ ನಟಿಸುವ ಮೂಲಕ ಸಾಕಷ್ಟು ಟೀಕೆ ಗುರಿಯಾಗಿದ್ದರು.
ಈ ಫೋಟೋದಲ್ಲಿರುವ ಕನ್ನಡದ ಖ್ಯಾತ ನಟಿಯಾರೆಂದು ಗುರುತಿಸಬಲ್ಲಿರಾ..?
ನಾನು ಮತ್ತೆ ಅದೇ ಶ್ರದ್ಧಾ ಆಗಬೇಕೆಂದಿದ್ದಾರೆ. ಅಮ್ಮ ನನಗಾಗಿ ಬಟ್ಟೆಗಳನ್ನು ತೆಗೆದಿಡಬೇಕು, ಅಪ್ಪ ನನ್ನ ಫೋಟೋ ತೆಗೆಯಬೇಕೆಂದು ಹೇಳುತ್ತಲೇ ಮನೆಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಈ ನಟಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.