Rajinikanth: ಸೂಪರ್​ಸ್ಟಾರ್ ರಜನೀಕಾಂತ್ ಜೀರೋ ಎಂದ ನಟಿ

Rajinikanth: ನಟ ರಜನೀಕಾಂತ್ ಬಗ್ಗೆ ತೆಲುಗು ನಟಿ ಮಾತನಾಡಿ ರಜನಿ ಜೀರೋ ಎಂದಿದ್ದು ಈಗ ವೈರಲ್ ಆಗಿದೆ. ನಟಿಯ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ.

First published:

  • 18

    Rajinikanth: ಸೂಪರ್​ಸ್ಟಾರ್ ರಜನೀಕಾಂತ್ ಜೀರೋ ಎಂದ ನಟಿ

    ಆಂಧ್ರಪ್ರದೇಶ ಪ್ರವಾಸೋದ್ಯಮ ಸಚಿವೆ ಆರ್​ಕೆ ರೋಜಾ ಅವರು ರಜನೀಕಾಂತ್ ಅವರನ್ನು ಜೀರೋ ಎಂದು ವಿವಾದ ಮೈಮೇಲೆಳೆದುಕೊಂಡಿದ್ದಾರೆ. ನಟಿಯ ಹೇಳಿಕೆ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದ್ದು ಸೂಪರ್​ಸ್ಟಾರ್ ರಜನಿ ಅಭಿಮಾನಿಗಳು ನಟಿ ಬಗ್ಗೆ ಕಿಡಿ ಕಾರಿದ್ದಾರೆ.

    MORE
    GALLERIES

  • 28

    Rajinikanth: ಸೂಪರ್​ಸ್ಟಾರ್ ರಜನೀಕಾಂತ್ ಜೀರೋ ಎಂದ ನಟಿ

    ನಟಿ ಹಾಗೂ ರಾಜಕಾರಣಿ ರೋಜಾ ಅವರು ಪುದುಚೇರಿಯಲ್ಲಿ ತಿರುಕಂಚಿ ಗಂಗೈ ವರದರಾಜು ನದೀಶ್ವರರ್ ಪುಷ್ಕರಣಿ ಆಚರಣೆಯಲ್ಲಿ ಭಾಗವಹಿಸಲು ಬಂದಿದ್ದರು. ಇದು 12 ವರ್ಷಗಳಿಗೊಮ್ಮೆ ನಡೆಯುವ ಆಚರಣೆ.

    MORE
    GALLERIES

  • 38

    Rajinikanth: ಸೂಪರ್​ಸ್ಟಾರ್ ರಜನೀಕಾಂತ್ ಜೀರೋ ಎಂದ ನಟಿ

    ನಂದಮೂರಿ ತಾರಕ ರಾಮ ರಾವ್ ಇವೆಂಟ್​ನಲ್ಲಿ ಚಂದ್ರಬಾಬು ನಾಯ್ಡು ಅವರನ್ನು ರಜನೀಕಾಂತ್ ಹೊಗಳಿದ ಬಗ್ಗೆ ರೋಜಾ ಮಾತನಾಡಿದ್ದಾರೆ. ರಜನೀಕಾಂತ್ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿರುವಾಗ ಅವರು ರಾಜಕೀಯದ ಬಗ್ಗೆ ಮಾತು ಕೂಡಾ ಆಡಬಾರದು ಎಂದಿದ್ದಾರೆ ರೋಜಾ.

    MORE
    GALLERIES

  • 48

    Rajinikanth: ಸೂಪರ್​ಸ್ಟಾರ್ ರಜನೀಕಾಂತ್ ಜೀರೋ ಎಂದ ನಟಿ

    ಎನ್​ಟಿಆರ್ ಅವರು ನಮ್ಮಂತೆಯೇ ಒಬ್ಬ ಕಲಾವಿದ. ಅವರನ್ನು ದೇವರಂತೆ ಕಾಣುತ್ತಾರೆ. ನೀವು ಕೃಷ್ಣನನ್ನು ನೋಡಬೇಕಾದರೆ ನಾವು ಕೃಷ್ಣನನ್ನು ಎನ್​ಟಿಆರ್​ನಲ್ಲಿ ಕಾಣುತ್ತೇವೆ. ಹಾಗಾಗಿ ಅವರು ಹೇಗೆ ಮೃತಪಟ್ಟರು, ಅವರ ಪಕ್ಷವನ್ನು ಬೇರೆಯವರು ಒಯ್ದರು ಎನ್ನುವುದು ರಜನೀಕಾಂತ್ ಅವರಿಗೆ ಗೊತ್ತು ಎಂದಿದ್ದಾರೆ.

    MORE
    GALLERIES

  • 58

    Rajinikanth: ಸೂಪರ್​ಸ್ಟಾರ್ ರಜನೀಕಾಂತ್ ಜೀರೋ ಎಂದ ನಟಿ

    ತೆಲುಗು ಮಂದಿ ರಜನೀಕಾಂತ್ ಅವರನ್ನು ಒಬ್ಬ ಸೂಪರ್​ಸ್ಟಾರ್ ಆಗಿ ಕಾಣುತ್ತಾರೆ. ಆದರೆ ಅವರ ಭಾಷಣದ ನಂತರ ಎಲ್ಲರೂ ಅವರ ಬಗ್ಗೆ ಸಿಟ್ಟಾಗಿದ್ದಾರೆ. ಎನ್​ಟಿಆರ್ ಅವರನ್ನು ಕೊಲ್ಲಲು ಪ್ರಯತ್ನಿಸಿದ ಚಂದ್ರ ಬಾಬು ನಾಯ್ಡು ಅವರನ್ನು ರಜನಿ ಹೊಗಳಿದ್ದಾರೆ. ಎನ್​ಟಿಆರ್ ಅವರನ್ನು ಸ್ವರ್ಗದಿಂದ ಆಶಿರ್ವದಿಸುತ್ತಾರೆ ಎಂದಿದ್ದು ತಪ್ಪು ಎಂದಿದ್ದಾರೆ ರೋಜಾ.

    MORE
    GALLERIES

  • 68

    Rajinikanth: ಸೂಪರ್​ಸ್ಟಾರ್ ರಜನೀಕಾಂತ್ ಜೀರೋ ಎಂದ ನಟಿ

    ನಾವು ರಜನೀಕಾಂತ್ ಅವರನ್ನು ಬೇರೆ ಲೆವೆಲ್​​ನಲ್ಲಿಟ್ಟಿದ್ದೆವು. ಆದರೆ ಅವರು ಈಗ ಝೀರೋ ಆದರು. ಬೇರೆ ರಾಜ್ಯಕ್ಕೆ ಹೋಗಿ ಅಲ್ಲಿಯ ರಾಜಕೀಯದ ಬಗ್ಗೆ ಕಮೆಂಟ್ ಮಾಡುವ ಮೊದಲು ಅಲ್ಲಿನ ರಾಜಕೀಯ ತಿಳಿದುಕೊಳ್ಳಿ ಎಂದು ರೋಜಾ ಕಿಡಿ ಕಾರಿದ್ದಾರೆ.

    MORE
    GALLERIES

  • 78

    Rajinikanth: ಸೂಪರ್​ಸ್ಟಾರ್ ರಜನೀಕಾಂತ್ ಜೀರೋ ಎಂದ ನಟಿ

    ನಾನು ಅವರು ಕ್ಷಮೆ ಕೇಳಬೇಕೆಂದು ಬಯಸುವುದಿಲ್ಲ. ಯಾಕೆಂದರೆ ಅವರು ಪಾಲಿಟಿಕ್ಸ್​ಗೆ ಎಂಟ್ರಿ ಕೊಡುವುದಿಲ್ಲ. ಆಂಧ್ರಪ್ರದೇಶಕ್ಕೂ ಹೆಚ್ಚು ಬರುವುದಿಲ್ಲ. ಗೊತ್ತಿದ್ದೋ ಇಲ್ಲದೆಯೋ ಅವರು ಮಾತನಾಡಿದ್ದಾರೆ. ಹಾಗಾಗಿ ಒಂದು ಹೇಳಿಕೆ ಬಿಡುಗಡೆ ಮಾಡಬೇಕು ಎಂದಿದ್ದಾರೆ ನಟಿ.

    MORE
    GALLERIES

  • 88

    Rajinikanth: ಸೂಪರ್​ಸ್ಟಾರ್ ರಜನೀಕಾಂತ್ ಜೀರೋ ಎಂದ ನಟಿ

    ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವವರಿದ್ದರು. ಆದರೆ ನಂತರ ತಮ್ಮ ಆರೋಗ್ಯ ಸ್ಥಿತಿಯಿಂದಾಗಿ ಪಕ್ಷವನ್ನು ಘೋಷಿಸಲಿಲ್ಲ. ಬದಲಾಗಿ ಸಿನಿಮಾಗಳಲ್ಲಿಯೇ ಆ್ಯಕ್ಟಿವ್ ಆದರು.

    MORE
    GALLERIES