ತಂದೆಯ ಸಾವಿನ ಸುದ್ದಿ 18 ದಿನ ಮೊದಲೇ ಗೊತ್ತಿದ್ದರಿಂದ ನನ್ನಲ್ಲಿ ತಳಮಳ ಶುರುವಾಗಿತ್ತು. ದಿನ ಕಳೆದಂತೆ ಅಪ್ಪನ ಆರೋಗ್ಯ ಕ್ಷೀಣಿಸುತ್ತಿದ್ದರಿಂದ ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ. ಆದರೆ ಗುರುಗಳು ಹೇಳಿದ 18 ದಿನಗಳ ಸಂಗತಿಯನ್ನು ನಾನೊಬ್ಬನೇ ನುಂಗಿಕೊಂಡಿದ್ದೆ. ಆದರೂ ಎಲ್ಲೋ ಒಂದು ಕಡೆ ಅಪ್ಪ ಸಾವು ಗೆದ್ದು ಬರಲಿದ್ದಾರೆ ಎಂದೇ ನಂಬಿದ್ದೆ ಎಂದು ರಕ್ಷಕ್ ಹೇಳಿದರು.