ಅಂತ್ಯಸಂಸ್ಕಾರದ ವೇಳೆ ಪ್ರಾಣಿ ಪ್ರೀತಿ; ಶವಪೆಟ್ಟಿಗೆ ಏರಿದ ಬುಲೆಟ್​ ಪ್ರಕಾಶ್​ ಪ್ರೀತಿಯ ನಾಯಿ

Bullet Prakash Funeral: ಬುಲೆಟ್ ಪ್ರಕಾಶ್ ಪಾರ್ಥಿವ ಶರೀರವನ್ನು ಭುವನೇಶ್ವರಿ ನಗರದ ನಿವಾಸಕ್ಕೆ ಕೊಂಡೊಯ್ದು, ನಂತರ 12 ಗಂಟೆ ಸುಮಾರಿಗೆ ಹೆಬ್ಬಾಳಕ್ಕೆ ತಂದು ಅಂತ್ಯಸಂಸ್ಕಾರ ಮಾಡಲಾಯಿತು.

First published:

 • 15

  ಅಂತ್ಯಸಂಸ್ಕಾರದ ವೇಳೆ ಪ್ರಾಣಿ ಪ್ರೀತಿ; ಶವಪೆಟ್ಟಿಗೆ ಏರಿದ ಬುಲೆಟ್​ ಪ್ರಕಾಶ್​ ಪ್ರೀತಿಯ ನಾಯಿ

  ತಮ್ಮ ಅದ್ಭುತ ಹಾಸ್ಯದ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಬುಲೆಟ್​ ಪ್ರಕಾಶ್​ ಈಗ ಮಣ್ಣಲ್ಲಿ ಮಣ್ಣಾಗಿದ್ದಾರೆ. ಬೆಂಗಳೂರಿನ ಹೆಬ್ಬಾಳದ ರುದ್ರಭೂಮಿಯಲ್ಲಿ ಅವರ ಅಂತ್ಯಸಂಸ್ಕಾರ ನಡೆಯಿತು.

  MORE
  GALLERIES

 • 25

  ಅಂತ್ಯಸಂಸ್ಕಾರದ ವೇಳೆ ಪ್ರಾಣಿ ಪ್ರೀತಿ; ಶವಪೆಟ್ಟಿಗೆ ಏರಿದ ಬುಲೆಟ್​ ಪ್ರಕಾಶ್​ ಪ್ರೀತಿಯ ನಾಯಿ

  ಕೊರೋನಾದಿಂದ ಲಾಕ್​ಡೌನ್​ ಇರುವ ಹಿನ್ನೆಲೆಯಲ್ಲಿ ಬುಲೆಟ್​ ಪ್ರಕಾಶ್​ ಅಂತಿಮ ದರ್ಶನಕ್ಕೆ ಅಭಿಮಾನಿಗಳಿಗೆ ಹಾಗೂ ಸೆಲೆಬ್ರಿಟಿಗಳಿಗೆ ಅವಕಾಶ ಇರಲಿಲ್ಲ. ಹೀಗಾಗಿ ಕುಟುಂಬದವರು ಹಾಗೂ ಆಪ್ತರು ಮಾತ್ರ ಬುಲೆಟ್​ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

  MORE
  GALLERIES

 • 35

  ಅಂತ್ಯಸಂಸ್ಕಾರದ ವೇಳೆ ಪ್ರಾಣಿ ಪ್ರೀತಿ; ಶವಪೆಟ್ಟಿಗೆ ಏರಿದ ಬುಲೆಟ್​ ಪ್ರಕಾಶ್​ ಪ್ರೀತಿಯ ನಾಯಿ

  ಕೆಲ ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಪಡೆದು ಮನೆಗೆ ವಾಪಾಸಾಗಿದ್ದರು. ಆದರೆ, ಕಳೆದ ವಾರ ಪ್ರಕಾಶ್​ ಅವರು ಚಿಕಿತ್ಸೆಗಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆರೋಗ್ಯದಲ್ಲಿ ಸುಧಾರಣೆ ಕಂಡ ಕಾರಣಕ್ಕೆ ಆಗ ಮನೆಗೆ ಹಿಂತಿರುಗಿದ್ದರು. ಮತ್ತೆ ಭಾನುವಾರ ಅವರಿಗೆ ತೀವ್ರ ಅನಾರೋಗ್ಯ ಕಾಡಿತ್ತು. ಹೀಗಾಗಿ ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

  MORE
  GALLERIES

 • 45

  ಅಂತ್ಯಸಂಸ್ಕಾರದ ವೇಳೆ ಪ್ರಾಣಿ ಪ್ರೀತಿ; ಶವಪೆಟ್ಟಿಗೆ ಏರಿದ ಬುಲೆಟ್​ ಪ್ರಕಾಶ್​ ಪ್ರೀತಿಯ ನಾಯಿ

  ಬುಲೆಟ್​ ಪ್ರಕಾಶ್​ ಅಂತ್ಯಕ್ರಿಯೆ ವೇಳೆ ಬುಲೆಟ್​ ಪ್ರಕಾಶ್​ ಸಾಕಿದ್ದ ಟೈಸನ್​ ಹೆಸರಿನ ನಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.

  MORE
  GALLERIES

 • 55

  ಅಂತ್ಯಸಂಸ್ಕಾರದ ವೇಳೆ ಪ್ರಾಣಿ ಪ್ರೀತಿ; ಶವಪೆಟ್ಟಿಗೆ ಏರಿದ ಬುಲೆಟ್​ ಪ್ರಕಾಶ್​ ಪ್ರೀತಿಯ ನಾಯಿ

  ಹೌದು, ಟೈಸನ್​ ಶವಪೆಟ್ಟಿಗೇ ಏರಿ ಕುಳಿತು ಬಿಟ್ಟಿದ್ದ. ತನ್ನನ್ನು ಸಾಕಿದ ಯಜಮಾನನ್ನು ಕಳುಹಿಸಿಕೊಡಲಾಗದೆ ಈ ಶ್ವಾನ ಮೂಕ ರೋದನ ಹೊರ ಹಾಕಿತ್ತು.

  MORE
  GALLERIES