ಈ ಹಾಟ್‌ಪ್ಯಾಂಟ್‌ಅನ್ನು ಮರ್ಕ್ಯುರಿ ಗೆಳತಿ ಮೇರಿ ಆಸ್ಟಿನ್ ಎಂಬುವವರು ಹರಾಜಿಗಿಟ್ಟಿದ್ದರು. ಈ ನಿಗಧಿಕತ ಮೊತ್ತಕ್ಕಿಂತ ಹಲವು ಪಟ್ಟು ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿವೆ. ಪ್ರಮುಖ ಹರಾಜು ಸಂಸ್ಥೆ ನ್ಯೂಟನ್-ಲೆ-ವಿಲ್ಲೋಸ್ ಈ ಹಾಟ್‌ಪ್ಯಾಂಟ್‌ಗಳನ್ನು £ 8,000 (ಸುಮಾರು ರೂ 8 ಲಕ್ಷ) ಎಂದು ಅಂದಾಜಿಸಿತ್ತು. ಆದರೆ ಅಂದಾಜು ಮಾಡಿದ ಮೊತ್ತಕ್ಕಿಂತ ಹೆಚ್ಚು ಮಾರಾಟವಾಗಿದ್ದು, ಇದು ನಂಬಲಸಾಧ್ಯ ಎಂದು ಸಂಸ್ಥೆ ತಿಳಿಸಿದೆ.
ಮರ್ಕ್ಯುರಿ ತನ್ನ ಸಾವಿನ ಮೊದಲು ತನ್ನ ಆಪ್ತ ಸ್ನೇಹಿತೆ ಮೇರಿ ಆಸ್ಟನ್ಗೆ ಹಲವು ವಸ್ತುಗಳನ್ನು ಹಸ್ತಾಂತರಿಸಿದ್ದರು. ವರದಿಯ ಪ್ರಕಾರ ಆ ವಸ್ತುಗಳ್ನು ಮೂರು ದಶಕಗಳಿಂದ ಲಂಡನ್‌ನಲ್ಲಿರುವ ಮರ್ಕ್ಯುರಿ ಮನೆಯಲ್ಲಿ ಸಂಗ್ರಹಿಸಲಾಗಿತ್ತು. ಒಟ್ಟು 1500 ವಸ್ತುಗಳನ್ನು ಹರಾಜು ಮಾಡಲಾಗಿದೆ. ಈ ಸಂಗ್ರಹಗಳಲ್ಲಿ ಅವರು ಕೆಂಪು ವೆಲ್ವೆಟ್, ವೇದಿಕೆಯ ಮೇಲೆ ಧರಿಸಿರುವ ಟೋಪಿ, ಕಿರೀಟ ಮತ್ತು ಅವರ ಫೋನ್ಗಳು ಹಾಗೂ ಅವರ ಹಸ್ತಾಕ್ಷರವುಳ್ಳ ಪ್ರತಿಗಳನ್ನು ಮಾರಾಟ ಮಾಡಲಾಗಿದೆ.
ಕಳೆದ ವರ್ಷ ಕ್ವೀನ್ ಫ್ರಂಟ್‌ಮ್ಯಾನ್ ಫ್ರೆಡ್ಡಿ ಮರ್ಕ್ಯುರಿ ಒಡೆತನದಲ್ಲಿದ್ದ 1974ರ ರೋಲ್ಸ್ ರಾಯ್ಸ್ ಕಾರನ್ನು ಹರಾಜಿಗೆ ಇಡಲಾಗಿತ್ತು. ಅದು ಅಂದಾಜಿನ 14 ಪಟ್ಟು ಹೆಚ್ಚು ಮಾರಾಟವಾಗಿತ್ತು. ಆ ಕಾರು 20,000 to £30,000 ಪೌಂಡ್ (20 ಲಕ್ಷದಿಂದ 30 ಲಕ್ಷ) ವರೆಗೆ ಮಾರಾಟವಾಗಬಹುದು ಎಂದು ಭಾವಿಸಲಾಗಿತ್ತು. ಆದರೆ ಎಲ್ಲರ ನಿರೀಕ್ಷೆ ಮೀರಿ 286,250 ಪೌಂಡ್ಗೆ (2,91,65,316) ಮಾರಾಟವಾಗಿತ್ತು.