Sonu Sood: ಸೋನು ಸೂದ್ರನ್ನು ಭೇಟಿಯಾಗಲು ಹೈದರಾಬಾದಿನಿಂದ ಮುಂಬೈಗೆ ಬರಿಗಾಲಿನಲ್ಲಿ ನಡೆದು ಬಂದ ಅಭಿಮಾನಿ
ಕೊರೋನಾ ಮೊದಲ ಅಲೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಸಂಕಷ್ಟದಲ್ಲಿರುವವರಿಗೆ ಸೋನು ಸೂದ್ ನೆರವಿನ ಹಸ್ತ ಚಾಚುತ್ತಲೇ ಇದ್ದಾರೆ. ಅದಕ್ಕೆ ಸೋನು ಸೂದ್ ಅವರನ್ನು ರಿಯಲ್ ಹೀರೋ ಎಂದು ಕರೆಯುತ್ತಾರೆ ಅಭಿಮಾನಿಗಳು. ಇಂತಹ ನಟನನ್ನು ನೋಡಲು ಅಭಿಮಾನಿಯೊಬ್ಬರು ಬರಿಗಾಲಿನಲ್ಲಿ ನಡೆದು ಹೈದರಾಬಾದಿನಿಂದ ಮುಂಬೈಗೆ ಬಂದಿದ್ದಾರೆ. (ಚಿತ್ರಗಳು ಕೃಪೆ: ಸೋನು ಸೂದ್ ಇನ್ಸ್ಟಾಗ್ರಾಂ ಖಾತೆ)
ಸೋನು ಸೂದ್ ಅವರಿಗೆ ಈ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ.
2/ 9
ಸೋನು ಸೂದ್ ಅವರ ಸಿನಿಮಾಗಿಂತ ಹೆಚ್ಚಾಗಿ ಅವರು ಮಾಡುತ್ತಿರುವ ಕೆಲಸದಿಂದಾಗಿ ಅವರಿಗೆ ಅಭಿಮಾನಿಗಳಾಗಿರುವವರೇ ಹೆಚ್ಚು.
3/ 9
ಇಂತಹ ಅಭಿಮಾನಿಯೊಬ್ಬರು ಸೋನು ಸೂದ್ ಅವರನ್ನು ನೋಡಲು ಹೈದರಾಬಾದಿನಿಂದ ಮುಂಬೈಗೆ ಬಂದಿದ್ದಾರೆ.
4/ 9
ನೆಚ್ಚಿನ ನಟನನ್ನು ನೋಡಲು ಬರಿಗಾಲಿನಲ್ಲೇ 700 ಕಿ.ಮೀ ನಡೆದು ಬರಲು ನಿರ್ಧರಿಸಿದ ವೆಂಕಟೇಶ್ ಎಂಬ ಯುವಕ ಕೊನೆಗೂ ಮುಂಬೈ ತಲುಪಿದ್ದಾರೆ.
5/ 9
ಸೋನು ತಮ್ಮ ಅಭಿಮಾನಿ ವೆಂಕಟೇಶ್ ಅವರ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
6/ 9
ತನ್ನನ್ನು ನೋಡಲು ಬಂದಿದ್ದ ಅಭಿಮಾನಿಯನ್ನು ಮತ್ತೆ ಮನೆಗೆ ಕಳುಹಿಸಲು ವಾಹನ ವ್ಯವಸ್ಥೆ ಮಾಡು ಪರದಾಡಿದ್ದಾಗಿಯೂ ತಿಳಿಸಿದ್ದಾರೆ. ಮತ್ತೆ ಇಂತಹ ಸಾಹಸ ಮಾಡಬಾರದು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ ಸೋನು.
7/ 9
ಅಭಿಮಾನಿಗಳ ಇಂತಹ ನಿರ್ಧಾರಗಳನ್ನು ತಾನು ಎಂದೂ ಪ್ರೋತ್ಸಾಹಿಸುವುದಿಲ್ಲ ಎಂದೂ ಹೇಳಿದ್ದಾರೆ.
8/ 9
ವೆಂಕಟೇಶ್ ಅವರ ಅಭಿಮಾನಕ್ಕೆ ನಾನು ಚಿರಋಣಿ ಆದರೆ ಇಂತಹ ಕೆಲಸಗಳನ್ನು ಯಾರೂ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
9/ 9
ಸೋನು ಸೂದ್ ಸದ್ಯ ಎನ್ಜಿಒ ಒಂದರ ಜೊತೆ ಕೈ ಜೋಡಿಸಿದ್ದು ಅಗತ್ಯವಿದ್ದವರಿಗೆ ಆಮ್ಲಜಕ ಪೂರೈಸುವ ಕೆಲಸದಲ್ಲೂ ನಿರತರಾಗಿದ್ದಾರೆ.