Khushi Kapoor: ಶ್ರೀದೇವಿಯ ಎರಡನೇ ಮಗಳು ಖುಷಿ ಬಾಲಿವುಡ್ ಎಂಟ್ರಿ: ಮಾಹಿತಿ ಕೊಟ್ಟ ಬೋನಿ ಕಪೂರ್..!
ನಟಿ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಅವರ ಎರಡನೇ ಮಗಳು ಖುಷಿ ಕಪೂರ್ ಬಾಲಿವುಡ್ ಎಂಟ್ರಿಗೆ ವೇದಿಕೆ ಸಜ್ಜಾಗಿದೆ. ಯಾವ ಪ್ರೊಕ್ಷನ್ ಹೌಸ್ನಿಂದ ಖುಷಿಯನ್ನು ಲಾಂಚ್ ಮಾಡಲಾಗುತ್ತದೆ ಅನ್ನೋ ವಿಷಯ ಈಗ ಚರ್ಚೆಯ ಹಾಟ್ ಟಾಪಿಕ್ ಆಗಿದೆ. ಈ ಬಗ್ಗೆ ಖುದ್ದು ಅಪ್ಪ ಬೋನಿ ಕಪೂರ್ ಮಾಹಿತಿ ನೀಡಿದ್ದಾರೆ. (ಚಿತ್ರಗಳು ಕೃಪೆ: ಖುಷಿ ಕಪೂರ್ ಇನ್ಸ್ಟಾಗ್ರಾಂ ಖಾತೆ)
ಶ್ರೀದೇವಿ ಅವರ ಎರಡನೇ ಮಗಳು ಹಾಗೂ ನಟಿ ಜಾಹ್ನವಿ ಕಪೂರ್ ತಂಗಿ ಖುಷಿ ಕಪೂರ್ ಇನ್ನೇನು ಬಾಲಿವುಡ್ಗೆ ಎಂಟ್ರಿ ಕೊಡಲಿದ್ದಾರೆ.
2/ 9
ಜಾಹ್ನವಿ ಕಪೂರ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟಾಗಲೇ ಖುಷಿಯ ಲಾಂಚ್ ಬಗ್ಗೆಯೂ ಚರ್ಚೆ ಆರಂಭವಾಗಿತ್ತು.
3/ 9
ಸದ್ಯ ಮಾಡೆಲಿಂಗ್ನಲ್ಲಿ ಬ್ಯುಸಿಯಾಗಿರುವ ಖುಷಿಗೆ ಸಿನಿಮಾಗೆ ಬರುವ ಆಲೋಚನೆ ಇಲ್ಲ ಎಂದು ಹೇಳಲಾಗಿತ್ತು.
4/ 9
ಆದರೆ ಈಗ ಖುಷಿ ಬಾಲಿವುಡ್ ಎಂಟ್ರಿಗೆ ವೇದಿಕೆ ಸಜ್ಜಾಗಿದೆ. ಈ ಕುರಿತಾಗಿ ಫಿಲಂ ಮೇಕರ್ ಬೋನಿ ಕಪೂರ್ ಸ್ಪಷ್ಟಪಡಿಸಿದ್ದಾರೆ.
5/ 9
ಇಂಗ್ಲಿಷ್ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಬೋನಿ ಕಪೂರ್, ಸದ್ಯದಲ್ಲೇ ಖುಷಿ ಬಾಲಿವುಡ್ ಎಂಟ್ರಿ ಬಗ್ಗೆ ಪ್ರಕಟಣೆ ಹೊರ ಬೀಳಲಿದೆ ಎಂದಿದ್ದಾರೆ.
6/ 9
ಆದರೆ, ಖುಷಿಯನ್ನು ತಾನು ಲಾಂಚ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
7/ 9
ಖ್ಯಾತ ನಿರ್ದೇಶಕರೊಬ್ಬರು ಖುಷಿಯನ್ನು ತಮ್ಮ ಸಿನಿಮಾದ ಮೂಲಕ ಲಾಂಚ್ ಮಾಡಲಿದ್ದಾರಂತೆ.
8/ 9
ಇತ್ತೀಚೆಗಷ್ಟೆ ಖುಷಿ ತಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ಪಬ್ಲಿಕ್ ಮಾಡುವ ಮೂಲಕ ಸುದ್ದಿಯಲ್ಲಿದ್ದರು.
9/ 9
ಮಾಡೆಲಿಂಗ್ ಮಾಡುತ್ತಾ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಖುಷಿ ಯಾವ ನಿರ್ದೇಶಕ ಹಾಗೂ ಪ್ರೊಡಕ್ಷನ್ ಹೌಸ್ನ ಸಿನಿಮಾದ ಮೂಲಕ ತಮ್ಮ ಸಿನಿ ಜೀವನ ಆರಂಭಿಸಲಿದ್ದಾರೆ ಅನ್ನೋ ಕುತೂಹಲ ಸಿನಿಪ್ರಿಯರನ್ನು ಕಾಡುತ್ತಿದೆ,.