Bond Ravi New Film: ಕನ್ನಡ ಚಿತ್ರರಂಗ ಕೊರೊನಾ ನಂತರ ಚೇತರಿಸಿಕೊಳ್ಳುತ್ತಿದೆ. ಒಂದೆಲ್ಲಾ ಒಂದು ಮೂವಿ ತೆರೆಗೆ ಬರುತ್ತಿದ್ದರೆ, ಕೆಲವೊಂದು ಚಿತ್ರಗಳು ಶೂಟಿಂಗ್ ಮುಗಿಸಿವೆ. ಇದೀಗ ಮತ್ತೊಂದು ಚಿತ್ರತಂಡ ಮುಕ್ಕಾಲು ಭಾಗ ಶೂಟಿಂಗ್ ಮುಗಿಸಿದ್ದು, ಸಾಹಸ ದೃಶ್ಯಗಳನ್ನು ಶೂಟ್ ಮಾಡುತ್ತಿರುವ ಕೆಲ ಫೋಟೋ ವೈರಲ್ ಆಗಿದೆ.
ನಟ ಪ್ರಮೋದ್ ಪ್ರತಿಭಾನ್ವಿತ ನಟ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ರತ್ನನ್ ಪ್ರಪಂಚ ಚಿತ್ರದಲ್ಲಿ ಅವರ ನಟನೆಗೆ ಸ್ಯಾಂಡಲ್ವುಡ್ ಫಿದಾ ಆಗಿತ್ತು. ಈಗ ಅವರು ನಾಯಕನಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ಬಾಂಡ್ ರವಿ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ.
2/ 8
ಈಗಾಗಲೇ 70ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ, ಬೆಂಗಳೂರಿನ HMTಯಲ್ಲಿ ಸಾಹಸ ದೃಶ್ಯದ ಶೂಟಿಂಗ್ ನಡೆಸಿದ್ದು, ಅದರ ಕೆಲ ಫೋಟೋಗಳು ಫುಲ್ ವೈರಲ್ ಆಗುತ್ತಿದೆ. ಈ ಫೋಟೋಗಳನ್ನು ನೋಡಿ ಪ್ರಮೋದ್ ಅಭಿಮಾನಿಗಳು ಫಿದಾ ಆಗಿದ್ದಾರೆ.
3/ 8
ಈ ಸಾಹಸ ದೃಶ್ಯಗಳನ್ನು ಸಾಹಸ ನಿರ್ದೇಶಕ ಮಾಸ್ಟರ್ ವಿನೋದ್ ನಿರ್ದೇಶಿಸಿದ್ದು, ಚಿತ್ರೀಕರಣ ಅದ್ಭುತವಾಗಿ ಮೂಡಿ ಬಂದಿದೆ ಎಂದು ಚಿತ್ರತಂಡ ತಿಳಿಸಿದೆ. ಇನ್ನು ಶೂಟಿಂಗ್ನಲ್ಲಿ ಪ್ರಮೋದ್, ಸಹಕಲಾವಿದರು ಭರ್ಜರಿ ಆಕ್ಷನ್ ಸೀನ್ ನಡೆದಿದ್ದು, ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾಯುತ್ತಿದ್ಧಾರೆ.
4/ 8
ಈ ಚಿತ್ರವನ್ನು ಹನ್ನೊಂದು ವರ್ಷದಿಂದ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿರುವ ಪ್ರಜ್ವಲ್ ನಿರ್ದೇಶನ ಮಾಡುತ್ತಿದ್ದು, ಇದೊಂದು ಕಮರ್ಷಿಯಲ್, ಆಕ್ಷನ್-ಲವ್ ಸ್ಟೋರಿ ಸಿನಿಮಾವಾಗಿದೆ ಎಂದು ಚಿತ್ರತಂಡ ತಿಳಿಸಿದೆ.
5/ 8
ಲೈಫ್ ಲೈನ್ ಫಿಲ್ಮಸ್ ಬ್ಯಾನರ್ ಅಡಿಯಲ್ಲಿ ನರಸಿಂಹಮೂರ್ತಿ ಅವರು ಈ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದು, ಇವರು ಈ ಹಿಂದೆ ಮಾದ ಮತ್ತು ಮಾನಸಿ ಸಿನೆಮಾವನ್ನು ನಿರ್ಮಾಣ ಮಾಡಿದ್ದರು. ಮಲ್ಲಿಕಾರ್ಜುನ್ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ.
6/ 8
ಪ್ರಮೋದ್ ಗೆ ನಾಯಕಿಯಾಗಿ ಮಾಯಕನ್ನಡಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಕಾಜಲ್ ಕುಂದರ್ ಮಾಡುತ್ತಿದ್ದು, ಇಬ್ಬರ ಕೆಮೆಸ್ಟ್ರಿ ಚೆನ್ನಾಗಿ ವರ್ಕ್ ಆಗುತ್ತದೆ ಎನ್ನಲಾಗುತ್ತಿದೆ.
7/ 8
ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್, ತೆಲುಗಿನ ಖ್ಯಾತ ನಟ ರವಿ ಪ್ರಕಾಶ್ ಸೇರಿದಂತೆ ಅದ್ಭುತವಾದ ತಾರಾಬಳಗವನ್ನು ಈ ಚಿತ್ರತಂಡ ಹೊಂದಿದೆ.
8/ 8
ಕೆಎಸ್ ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಸಂಕಲನ, ಮನೋಮೂರ್ತಿ ಸಂಗೀತ, ಜಯಂತ್ ಕಾಯ್ಕಿಣಿ ಹಾಗೂ ನಾಗೇಂದ್ರ ಪ್ರಸಾದ್ ಸಾಹಿತ್ಯ ಸಿನಿಮಾಕ್ಕಿದೆ.