80 ಮತ್ತು 90ರ ದಶಕದದಲ್ಲಿ ಬಿ-ಟೌನ್ನಲ್ಲಿ ಖಳನಾಯಕ ನಟರಾಗಿದ್ದ ಮಹೇಶ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅನೇಕ ಬಾಲಿವುಡ್ ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ಮಹೇಶ್ ದಿಗ್ಗಜ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕಳೆದ ತಿಂಗಳು ತೆರೆಕಂಡ 'ರಂಗೀಲಾ ರಾಜಾ' ಚಿತ್ರ ಮಹೇಶ್ ಆನಂದ್ ನಟಿಸಿದ ಕೊನೆಯ ಚಿತ್ರ. 'ಕುರುಕ್ಷೇತ್ರ', 'ಸ್ವರ್ಗ್', 'ಕೂಲಿ ನಂ.1', 'ವಿಜೇತ'ಸೇರಿದಂತೆ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. 57 ವರ್ಷದ ಈ ನಟನ ದೇಹ ಮುಂಬೈನ ಅವರ ನಿವಾಸದಲ್ಲಿ ಶನಿವಾರ (ಫೆ.09) ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸದ್ಯ ಇವರ ಸಾವು ಆತ್ಮಹತ್ಯೆಯೇ ಅಥವಾ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.
1997 ಆಗಸ್ಟ್ 12ರಂದು ಟಿ-ಸೀರೀಸ್ ಮಾಲೀಕ ಹಾಗೂ ನಿಮಾ್ಪಕ ಗುಲ್ಷನ್ ಕುಮಾರ್ ಅವರಿಗೆ ಜಿತೇಶ್ವರ್ ಮಹದೇವ ಮಂದಿರದ ಎದುರು ಗುಂಡಿಕ್ಕಿ ಕೊಲ್ಲಲಾಗಿತ್ತು. ಸಂಗೀತ ಲೋಕ ದಿಗ್ಗಜರಾದ ನದೀಮ್-ಶ್ರವಣ್ ಜೋಡಿಯಲ್ಲಿ ಸಂಗೀತಕಾರ ನದೀಮ್ ಸೈಫಿ ಅವರ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೆ ಗುಲ್ಷನ್ ಕುಮಾರ್ ಹತ್ಯೆಯಲ್ಲಿ ಮುಂಬೈನ ಅಂಡರ್ವರ್ಲ್ಡ್ನ ಕೈವಾಡವಿತ್ತು ಎಂದು ಹೇಳಲಾಗುತ್ತದೆ. ಆದರೂ ಈ ಕೊಲೆಗೆ ಯಾರು ಮತ್ತು ಏನು ಕಾರಣ ಎಂದು ಇಂದಿಗೂ ಗೊತ್ತಾಗಿಲ್ಲ.
ಅಮಿತಾಭ್ ಬಚ್ಚನ್ ಜತೆ 'ನಿಶಬ್ಧ್' ಸಿನಿಮಾದಲ್ಲಿ ತೆರೆ ಹಂಚಿಕೊಂಡು ಆಗಷ್ಟೆ ವೃತ್ತಿ ಜೀವನ ಆರಂಭಿಸುತ್ತಿದ್ದ ಜಿಯಾ ಖಾನ್ ಇದ್ದಕ್ಕಿದಂತೆ ಸಾವನ್ನಪ್ಪುತ್ತಾರೆ. ಮೊದಲು ಜಿಯಾ ಅವರ ಸಾವು ಕೊಲೆ ಎನ್ನಲಾಗುತ್ತಿದ್ದಾದರೂ, ನಂತರ ಅದು ಆತ್ಮಹತ್ಯೆ ಎಂದಾಯಿತು. ಅದಕ್ಕೆ ಕಾರಣ ಅವರ ಪ್ರೇಮಿ ಸೂರಜ್ ಪಂಚೋಲಿ ಎಂದು ಆರೋಪಿಸಲಾಗಿತ್ತು. ಈ ಪ್ರಕರಣಕ್ಕೆ ಕುರಿತಂತೆ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದ್ದು, ಇನ್ನೂ ಸತ್ಯಾಸತ್ಯತೆ ಹೊರ ಬಂದಿಲ್ಲ.
ಅತ್ಯಂತ ಕಡಿಮೆ ಸಮಯದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ ನಟಿ ದಿವ್ಯ ಆಭಾರತಿ. 1993ರಲ್ಲಿ ದಿವ್ಯಾರ ಸಾವಿನ ಸುದ್ದಿ ಕೇಳಿ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಅದರಲ್ಲೂ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿತ್ತಾದರೂ ಅದನ್ನು ಯಾರೂ ನಂಬಿರಲಿಲ್ಲ. ದಿವ್ಯಾ ಅವರ ಮನೆ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದರು. ಇಂದಿಗೂ ಇವರ ಸಾವು ಆತ್ಮಹತ್ಯೆನಾ ಅಥವಾ ಹತ್ಯೆನಾ ಎಂದು ಬಹಿರಂಗವಾಗಿಯೇ ಇಲ್ಲ.