ಆದರೆ ಅಕ್ಷಯ್ ನಿರ್ಧಾರದಿಂದ ನಿರ್ಮಾಪಕರು ಖುಷಿಯಾಗಿದ್ದಾರೆ. ಅಕ್ಷಯ ಅವರ ಈ ನಿರ್ಧಾರದಿಂದ ಚಿತ್ರದ ವೆಚ್ಚ ಕಡಿಮೆಯಾಗಲಿದೆ ಎನ್ನುತ್ತಾರೆ ನಿರ್ಮಾಪಕರು. ಅಕ್ಷಯ್ ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವವರಲ್ಲಿ ಒಬ್ಬರು. ಅಕ್ಷಯ್ ಅವರ ಕೊನೆಯ ನಾಲ್ಕು ಚಿತ್ರಗಳು ಫ್ಲಾಪ್ ಆಗಿದ್ದವು. ಅಕ್ಷಯ್ ಪ್ರತಿ ಚಿತ್ರಕ್ಕೆ ಸುಮಾರು 70 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂದು ವರದಿಯಾಗಿದೆ.
ಇನ್ನು ಅಕ್ಷಯ್ ಚಿತ್ರಗಳ ವಿಚಾರಕ್ಕೆ ಬಂದರೆ, ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ತೆರೆಕಂಡ 'ಸೂರ್ಯವಂಶಿ' ಚಿತ್ರದ ಮೂಲಕ ಅಕ್ಷಯ್ ಕುಮಾರ್ ಮತ್ತೊಮ್ಮೆ ಗಲ್ಲಾಪೆಟ್ಟಿಗೆಯಲ್ಲಿ ತಮ್ಮ ಶಕ್ತಿ ತೋರಿಸಿದ್ದಾರೆ. ಈ ಚಿತ್ರ ಬಾಲಿವುಡ್ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿತು. . ಅದಾದ ನಂತರ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಅವರು ನಟಿಸಿದ ‘ಅತರಂಗಿ ರೇ’ ಸಿನಿಮಾ ತೆರೆಕಂಡಿತ್ತು.