Shah Rukh Khan: 75 ಲಕ್ಷದ ವಾಚ್, 2 ಲಕ್ಷದ ಜಾಕೆಟ್, 1 ಕೋಟಿ ಖರ್ಚು ಮಾಡಿ ಫ್ಯಾನ್ಸ್ ನೋಡಲು ಬಂದ್ರು 'ಕಿಂಗ್' ಖಾನ್!
ಬಾಲಿವುಡ್ ಸ್ಟಾರ್ಗಳು ತನ್ನ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ರಾಯಲ್ ಲೈಫ್ ಸ್ಟೈಲ್ನಿಂದಲೂ ಭಾರೀ ಸುದ್ದಿಯಾಗ್ತಾರೆ. ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಕೂಡ ಇದಕ್ಕೆ ಹೊರತಲ್ಲ, ಫ್ಯಾನ್ಸ್ ನೋಡಲು ಶಾರುಖ್ ಖಾನ್ ತನ್ನ ಬಟ್ಟೆ, ವಾಚ್, ಶೂಗೆ 1 ಕೋಟಿ ಖರ್ಚು ಮಾಡಿದ್ದಾರೆ.
ನಟ-ನಟಿಯರು ಮದುವೆ, ಸಮಾರಂಭ ಹಾಗೂ ಸಿನಿಮಾ ಪ್ರಮೋಷನ್ಗಳಿಗೆ ಕಾಸ್ಟ್ಯೂಟ್ಗಳಿಗೆ ಲಕ್ಷ-ಲಕ್ಷ ಖರ್ಚು ಮಾಡೋದು ಕಾಮನ್ ಆಗಿದೆ. ಆದ್ರೆ, ನಟ ಶಾರುಖ್ ಖಾನ್ ಸಖತ್ ರಾಯಲ್ ಆಗಿ ಕೋಟಿ ಖರ್ಚು ಮಾಡಿದ್ದಾರೆ.
2/ 8
ವಾಚ್, ಬಟ್ಟೆ, ಶೂ, ಬ್ರೇಸ್ಲೈಟ್ ಸೇರಿದಂತೆ ಶಾರುಖ್ ಹಾಕಿದ್ದ ಫುಲ್ ಕಾಸ್ಟ್ಯೂಮ್ಗೆ 1 ಕೋಟಿ ಖರ್ಚು ಮಾಡಿದ್ದಾರೆ.
3/ 8
ಈ ರೀತಿ ಕೋಟಿ ಹಣ ಖರ್ಚು ಮಾಡಿ ರೆಡಿಯಾಗಿ ಹೋಗಿದ್ದು, ಫ್ಯಾಮಿಲಿ ಕಾರ್ಯಕ್ರಮಕ್ಕೂ ಅಲ್ಲ, ಸಿನಿಮಾ ಪ್ರೋಗ್ರಾಮ್ಗೆ ಅಲ್ಲ.
4/ 8
ಶಾರುಖ್ 1 ಕೋಟಿ ಖರ್ಚು ಮಾಡಿ ರೆಡಿಯಾಗಿ ಬಂದಿದ್ದು, ಅಭಿಮಾನಿಗಳ ಜೊತೆ ಸಂವಾದ ನಡೆಸಲು ಎನ್ನುವುದೆ ವಿಶೇಷವಾಗಿದೆ.
5/ 8
ಶಾರುಖ್ ಧರಿಸಿದ್ದ ಟೀಶರ್ಟ್, ಡೆನಿಮ್ ಜೀನ್ಸ್, ವಾಚ್ ಹಾಗೂ ಗ್ಲಾಸ್ಗಳು ಲಕ್ಷಗಟ್ಟಲೆ ಬೆಲೆಬಾಳುವಂತದ್ದು, ಇನ್ಸ್ಟಾಗ್ರಾಮ್ನಲ್ಲಿ SRK ಕ್ಲೋಸೆಟ್ , ಶಾರುಖ್ ಅವರ ಬಟ್ಟೆ , ಶೂ, ವಾಚ್, ಗ್ಲಾಸ್ ಬೆಲೆಯನ್ನು ಲೆಕ್ಕ ಹಾಕಿದೆ.
6/ 8
ಶಾರುಖ್ ಖಾನ್ ಅಭಿಮಾನಿಗಳನ್ನು ಭೇಟಿ ಮಾಡಲು ಧರಿಸಿರುವ ಜಾಕೆಟ್ ಫ್ರೆಂಚ್ ಐಷಾರಾಮಿ ಬ್ರಾಂಡ್ ಗಿವ್ಂಚಿ ಅವರದ್ದು, ಇದರ ಬೆಲೆ 1.60 ಲಕ್ಷಕ್ಕೂ ಹೆಚ್ಚಿದೆ.
7/ 8
ಶಾರುಕ್ ಧರಿಸಿದ್ದ ಜೀನ್ಸ್ ಅಮೆರಿಕನ್ ಫ್ಯಾಶನ್ ಬ್ರ್ಯಾಂಡ್ ವರ್ಜಿಲ್ ಅಬ್ಲೋ ಬ್ರಾಂಡ್, ಇದರ ಬೆಲೆ ಡಾಲರ್ಗಳಲ್ಲಿ 795 ಅಂದರೆ ಭಾರತೀಯ ಕರೆನ್ಸಿಯಲ್ಲಿ 65 ಸಾವಿರಕ್ಕಿಂತ ಹೆಚ್ಚಾಗಿದೆ.
8/ 8
ಶಾರುಖ್ ಖಾನ್ ಧರಿಸಿದ್ದ ವಾಚ್ ರೋಲೆಕ್ಸ್ ಕಂಪನಿಯದ್ದು, 'ಕಿಂಗ್ ಖಾನ್' ಧರಿಸಿರುವ ವಾಚ್ ಬೆಲೆ 1.90 ಲಕ್ಷ ಡಾಲರ್ ಗೂ ಹೆಚ್ಚು. ಭಾರತೀಯ ರೂಪಾಯಿಗಳಲ್ಲಿ ಇದು 74 ಲಕ್ಷ ರೂ. ಅಷ್ಟೇ ಅಲ್ಲದೇ ಬ್ರೇಸ್ಲೈಟ್ (ಕಾರ್ಟಿಯರ್-ಲೂಯಿ ವಿಟಾನ್) ಕೂಡ ಲಕ್ಷಗಟ್ಟಲೆ ಮೌಲ್ಯದ್ದಾಗಿತ್ತು.