ಕರಣ್ ಜೋಹರ್ ಮತ್ತು ಶಾರುಖ್ ಖಾನ್ ನಡುವಿನ ಸಂಬಂಧದ ಬಗ್ಗೆ ಗಾಸಿಪ್ಗಳು ಈ ಹಿಂದೆ ಬಾಲಿವುಡ್ನಲ್ಲಿ ವೈರಲ್ ಆಗಿದ್ದವು. ಶಾರುಖ್ ಖಾನ್ ಜೊತೆ ಕರಣ್ ಹಲವು ವರ್ಷಗಳಿಂದ ಸಂಬಂಧ ಹೊಂದಿದ್ದು, ಶಾರುಖ್ ಖಾನ್ ಜೊತೆ ಶಾರೀರಿಕ ಸಂಬಂಧವನ್ನೂ ಹೊಂದಿದ್ದರು ಎಂಬ ವದಂತಿಗಳು ಬಾಲಿವುಡ್ನಲ್ಲಿ ಹರಿದಾಡಿದ್ದವು. ಆದರೆ ಇದೀಗ ಕರಣ್ ತಮ್ಮ ಪುಸ್ತಕದ ಮೂಲಕ ಇವೆಲ್ಲದಕ್ಕೂ ಉತ್ತರ ನೀಡಿದ್ದಾರೆ.
ಇತ್ತೀಚೆಗಷ್ಟೇ ಕರಣ್ ಜೋಹರ್ ತಮ್ಮ ‘ಅ ಅನ್ ಸೂಟಬಲ್ ಬಾಯ್' ಎಂಬ ಪುಸ್ತಕ ಹೊರತಂದಿದ್ದಾರೆ. ಅದರಲ್ಲಿ ಶಾರುಖ್ ಜೊತೆಗಿನ ಸಂಬಂಧದ ಬಗ್ಗೆ ಉತ್ತರ ನೀಡಿದ್ದಾರೆ. "ನನ್ನ ಜೀವನದಲ್ಲಿ ನಾನು ಅನೇಕ ನಿಂದೆಗಳನ್ನು ಸಹಿಸಿಕೊಂಡಿದ್ದೇನೆ, ಆದರೆ ಯಾವುದೂ ನನ್ನನ್ನು ತುಂಬಾ ಕಾಡಲಿಲ್ಲ. ಕರಣ್ ಶಾರುಖ್ ಖಾನ್ ಜೊತೆ ಸಂಬಂಧವಿದೆ ಎಂಬ ಸುದ್ದಿ ಕೇಳಿ ನನ್ನ ಹೃದಯ ಒಡೆದುಹೋಯಿತು. ಸುದ್ದಿ ನನಗೆ ತುಂಬಾ ನೋವುಂಟು ಮಾಡಿದೆ. ಶಾರುಖ್ ನನಗೆ ತಂದೆಯಂತೆ‘ ಎಂದು ಕರಣ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.