ಹಿಂದಿಯಲ್ಲಿ ರಾಜಮೌಳಿ ನಿರ್ದೇಶಿಸಿದ RRR ರೂ. ಮೊದಲ ದಿನವೇ 20 ಕೋಟಿ ರೂ ಗಳಿಸಿತ್ತು. ಹಿಂದಿಯಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾ 53.95 ಕೋಟಿ ಕಲೆಕ್ಷನ್ ಮಾಡಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ. ಅದಲ್ಲದೆ ಹಿಂದಿ ಚಿತ್ರಗಳಲ್ಲೇ ಅತಿ ಹೆಚ್ಚು ಮೊದಲ ದಿನದ ಕಲೆಕ್ಷನ್ ಇದಾಗಿದೆ. ಶಾರುಖ್ ಖಾನ್ ಇತ್ತೀಚಿನ ಚಿತ್ರ 'ಪಠಾಣ್' ಈ ದಾಖಲೆಯನ್ನು ಮುರಿದಿದ್ದಾರೆ.
ಟಾಪ್ 3: ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ಅಭಿನಯದ ಚಿತ್ರ ಪಠಾಣ್ ಸಿನಿಮಾಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಇದು ಇಂಡಿಯನ್ ಸ್ಪೈ ಏಜೆನ್ಸಿ ಸಿನಿಮಾ ಆಗಿದೆ. ಈ ಸಿನಿಮಾ ಮೊದಲ ದಿನವೇ ದಾಖಲೆಯ ಕಲೆಕ್ಷನ್ ಮಾಡಿದೆ. ಮೊದಲ ದಿನವೇ ಸಿನಿಮಾ 55 ಕೋಟಿಗೂ ಹೆಚ್ಚು ಗಳಿಕೆ ಮಾಡಿ ದಾಖಲೆ ನಿರ್ಮಿಸಿದೆ. ಈಗಾಗಲೇ ಈ ಸಿನಿಮಾ ಬಿಡುಗಡೆಯಾದ 7 ದಿನಗಳಲ್ಲಿ ರೂ. 300 ಕೋಟಿ ಕ್ಲಬ್ ಸೇರಿದ ಮೊದಲ ಬಾಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ಸ್ 3ನೇ ಸ್ಥಾನದಲ್ಲಿದೆ. (ಟ್ವಿಟರ್/ಫೋಟೋ)