ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಚಿತ್ರದ ನಂತರ ಮೆಗಾ ಪವರ್ಸ್ಟಾರ್ ರಾಮ್ ಚರಣ್ ಟಾಪ್ ನಿರ್ದೇಶಕರಲ್ಲೊಬ್ಬರಾದ ಶಂಕರ್ ಅವರೊಂದಿಗೆ ಪ್ಯಾನ್-ಇಂಡಿಯನ್ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ಸದ್ಯ ಈ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ದಿಲ್ ರಾಜು ನಿರ್ಮಿಸುತ್ತಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕೆಲ ವರ್ಷಗಳಿಂದ ಶೂಟಿಂಗ್ ಗೆ ಬ್ರೇಕ್ ಕೊಟ್ಟಿದ್ದ ಚಿತ್ರತಂಡ ಇದೀಗ ಶರವೇಗದಲ್ಲಿ ಶೂಟಿಂಗ್ ಮುಗಿಸುತ್ತಿದೆ.