ಮೂರು ಬಾರಿ ವಿವಾಹವಾಗಿದ್ದರು ಶಾರುಖ್ ಖಾನ್!; ಕಿಂಗ್ ಖಾನ್ ಮತ್ತು ಗೌರಿ ಖಾನ್ ಪ್ರೀತಿ ಬಗ್ಗೆ ಗೊತ್ತಿದ್ಯಾ?
Shah Rukh Khan: ಶಾರುಖ್ ಖಾನ್ 1991ರಲ್ಲಿ ಗೌರಿ ಖಾನ್ ಅನ್ನು ವರಿಸಿದರು. ಮದುವೆಯಾದ ಒಂದು ವರ್ಷಗಳ ನಂತರ ಶಾರುಖ್ ಖಾನ್ಗೆ ಬಾಲಿವುಡ್ನಿಂದ ಆಫರ್ಗಳು ಬಂದವು.
News18 Kannada | November 24, 2020, 6:00 AM IST
1/ 11
ಬಾಲಿವುಡ್ ಕ್ಯೂಟ್ ಜೋಡಿಗಳಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಸಹ ಒಂದು. ಇವರಿಬ್ಬರು ಪ್ರೀತಿಸಿ ಮದುವೆಯಾದ ಜೋಡಿಗಳು.
2/ 11
ಇವರದ್ದು ಕಾಲೇಜು ದಿನಗಳಿಂದ ಹುಟ್ಟಿಕೊಂಡ ಪ್ರೀತಿ. ದೆಹಲಿಯಲ್ಲಿ ಇಬ್ಬರು ಓದುವ ಸಮಯದಲ್ಲಿ ಗೌರಿ ಖಾನ್ ಮತ್ತು ಶಾರುಖ್ ಖಾನ್ ನಡುವೆ ಪ್ರೀತಿ ಚಿಗುರೊಡೆಯುತ್ತದೆ. 6 ವರ್ಷಗಳ ಕಾಲ ಈ ಪ್ರೀತಿ ಹಾಗೆಯೇ ಸಾಗುತ್ತದೆ.
3/ 11
ಎಲ್ಲರಿಗೂ ಶಾರುಖ್ ಖಾನ್ ಮತ್ತು ಗೌರಿ ಖಾನ್ ಪ್ರೀತಿಸಿ ಮದುವೆಯಾಗಿದ್ದಾರೆ ಎಂಬುದು ಗೊತ್ತಿದೆ. ಆದರೆ ಎಷ್ಟು ಬಾರಿ ಮದುವೆಯಾಗಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಇವರಿಬ್ಬರ ಪ್ರೇಮ ಕಥೆ ಸಾಕಷ್ಟು ಆಸಕ್ತಿದಾಯಕವಾಗಿದೆ.
4/ 11
ಶಾರುಖ್ ಖಾನ್ 1991ರಲ್ಲಿ ಗೌರಿ ಖಾನ್ ಅನ್ನು ವರಿಸಿದರು. ಮದುವೆಯಾದ ಒಂದು ವರ್ಷಗಳ ನಂತರ ಶಾರುಖ್ ಖಾನ್ಗೆ ಬಾಲಿವುಡ್ನಿಂದ ಆಫರ್ಗಳು ಬಂದವು.
5/ 11
ಆದರೆಈ ಜೋಡಿ ಮೂರು ಬಾರಿ ಮದುವೆಯಾಗಿದ್ದರು ಎಂದರೆ ನಂಬುತ್ತೀರಾ? ಹೌದು. ಮೊದಲು ಶಾರುಖ್ ಖಾನ್ ಮತ್ತು ಗೌರಿ ಖಾನ್ ರಿಜಿಸ್ಟರ್ ಮದುವೆಯಾಗುತ್ತಾರೆ. ಎರಡನೆ ಬಾರಿ ಮುಸ್ಲಿಂ ಪದ್ಧತಿ ಪ್ರಕಾರ ಮದುವೆಯಾಗುತ್ತಾರೆ. ಮೂರನೇ ಬಾರಿ ಪಂಜಾಬಿ ಶೈಲಿಯಲ್ಲಿ ಮದುವೆಯಾಗುತ್ತಾರೆ.
6/ 11
ಶಾರುಖ್, ಗೌರಿ ಅವರನ್ನು ಮೊದಲು ಭೇಟಿ ಮಾಡಿದ್ದು ದೆಹಲಿ ಕ್ಲಬ್ವೊಂದರಲ್ಲಿ. ಇಬ್ಬರು ಒಟ್ಟಿಗೆ ಕೂತು ಜ್ಯೂಸ್ ಕುಡಿದಿದ್ದರಂತೆ. ಅದಾಗಿ ಮೂರು ದಿನಗಳ ನಂತರ ಗೌರಿ ಬಳಿ ಫೋನ್ ನಂಬರ್ ತೆಗೆದುಕೊಳ್ಳುತ್ತಾರೆ. ಅಲ್ಲಿಂದ ಇವರಿಬ್ಬರ ಪ್ರೀತಿ ಗಟ್ಟಿಯಾಗುತ್ತಾ ಹೋಗುತ್ತದೆ.
7/ 11
ಇವರಿಬ್ಬರ ಪ್ರೀತಿಗೆ ಮನೆಯವರ ಸಮ್ಮತಿ ಇರಲಿಲ್ಲ. ಆನಂತರ ಎರಡು ಕುಟುಂಬಗಳು ಇವರಿಬ್ಬರ ಸಂಬಂಧವನ್ನು ಒಪ್ಪಿಕೊಂಡಿತು. ಸದ್ಯ ಈ ಜೋಡಿ 29 ವರ್ಷಗಳನ್ನು ಒಟ್ಟಾಗಿ ಕಳೆದಿದೆ. ಮುಂದಿನ ವರ್ಷ 30ನೇ ವೆಡ್ಡಿಂಗ್ ಆ್ಯನಿವರ್ಸರಿ ಮಾಡಿಕೊಳ್ಳಲಿದ್ದಾರೆ ಈ ಜೋಡಿ.