FIFA-Deepika Padukone: FIFA ಫೈನಲ್ನಲ್ಲಿ ಮಿಂಚಿದ ದೀಪಿಕಾ ಪಡುಕೋಣೆ
FIFA - Deepika Padukone: ಫಿಫಾ ಫೈನಲ್ನಲ್ಲಿ ಬಾಲಿವುಡ್ನ ಹಾಟ್ ಬ್ಯೂಟಿ ದೀಪಿಕಾ ಪಡುಕೋಣೆ ಎಲ್ಲರನ್ನೂ ಮೆಚ್ಚಿಸಿದ್ದಾರೆ. ಯಾರಿಗೂ ಸಿಗದ ಅವಕಾಶ ಈ ಭಾರತೀಯ ನಟಿಗೆ ಒದಗಿ ಬಂದಿದೆ.
ಈ ಬಾರಿ ಫಿಫಾ ವಿಶ್ವಕಪ್ನ ಫೈನಲ್ನಲ್ಲಿ ಭಾರತದ ನಟಿ ಮಿಂಚಿದ್ದಾರೆ. ಫೈನಲ್ ಪಂದ್ಯ ನಡೆದ ಲುಸಿಲ್ಲೆ ಸ್ಟೇಡಿಯಂನಲ್ಲಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ವಿಶೇಷ ಆಕರ್ಷಣೆಯಾಗಿದ್ದರು.
2/ 8
ಫ್ರಾನ್ಸ್ ಮತ್ತು ಅರ್ಜೆಂಟೀನಾ ಫೈನಲ್ ಪಂದ್ಯಕ್ಕೂ ಮುನ್ನ ದೀಪಿಕಾ ಪಡುಕೋಣೆ ವಿಶ್ವಕಪ್ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಉದ್ದೇಶಕ್ಕಾಗಿ ಆಕೆ ವಿಶೇಷವಾಗಿ ಮುಂಬೈನಿಂದ ದೋಹಾಗೆ ಹೋಗಿದ್ದರು.
3/ 8
ಒಂದು ತಿಂಗಳಿನಿಂದ ಫುಟ್ಬಾಲ್ ಪ್ರೇಮಿಗಳನ್ನು ರಂಜಿಸುತ್ತಿದ್ದ ಫೀಫಾ ವಿಶ್ವಕಪ್ 2022 ನಿನ್ನೆ ಕೊನೆಗೊಂಡಿತು. ರಾತ್ರಿಯಲ್ಲಿ 8.30ಕ್ಕೆ ಅಂತಿಮ ಕದನದೊಂದಿಗೆ ಮಹಾಯುದ್ಧ ಮುಕ್ತಾಯವಾಯಿತು.
4/ 8
ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಎದುರಿಸಿತು. ಈ ಪಂದ್ಯವನ್ನು ಗೆದ್ದು ಅರ್ಜೆಂಟೀನಾ ಚಾಂಪಿಯನ್ ಆಯಿತು. ಪಂದ್ಯದ ಮೊದಲು FIFA ವಿಶ್ವ ಕಪ್ 2022 ಫೈನಲ್ನ ಅದ್ಧೂರಿ ಉದ್ಘಾಟನೆ ನಡೆಯಿತು.
5/ 8
ಈ ಐತಿಹಾಸಿಕ ಪಂದ್ಯಕ್ಕೆ ಗ್ಲಾಮರ್ ಸೇರಿಸಲು ಬಾಲಿವುಡ್ ನಟರೂ ಆಗಮಿಸಿದ್ದರು.
6/ 8
ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಉದ್ಘಾಟನಾ ಸಮಾರಂಭದಲ್ಲಿ ದೀಪಿಕಾ ಪಡುಕೋಣೆ ಭಾಗವಹಿಸಿದ್ದರು. ಫೈನಲ್ಗೂ ಮುನ್ನ ದೀಪಿಕಾ ಪಡುಕೋಣೆ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ್ದರು
7/ 8
ದೀಪಿಕಾ ಪಡುಕೋಣೆ ಫಿಫಾ ವಿಶ್ವಕಪ್ ಟ್ರೋಫಿಯೊಂದಿಗೆ ಪೋಸ್ ಕೊಟ್ಟಿದ್ದಾರೆ. ಆಕೆಯ ಫೋಟೋಗಳು ಹಲವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
8/ 8
ಫಿಫಾ ವಿಶ್ವಕಪ್ ಫೈನಲ್ನಲ್ಲಿ ದೀಪಿಕಾ ಅವರ ಕ್ಲಾಸಿ ಲುಕ್ ಅಭಿಮಾನಿಗಳ ಹೃದಯವನ್ನು ಗೆದ್ದಿದೆ. ಪಠಾಣ್ ವಿವಾದದ ನಡುವೆ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಬಂದಿದ್ದ ದೀಪಿಕಾ ಮತ್ತೆ ಸುದ್ದಿಯಾಗಿದ್ದಾರೆ.