ಕಾಂತಾರ ಸಿನಿಮಾವನ್ನು ನೋಡಿಲ್ಲ ಎಂದು ಹೇಳುವ ಮೂಲಕ ಕನ್ನಡ ಸಿನಿಮಾ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದ್ದ ರಶ್ಮಿಕಾರನ್ನು ಕನ್ನಡ ಸಿನಿಮಾ ಇಂಡಸ್ಟ್ರಿ ಬ್ಯಾನ್ ಮಾಡ್ಬೇಕು ಅನ್ನೋ ಮಾತು ಕೇಳಿ ಬಂದಿತ್ತು. ಆ ಬಳಿಕ ಒಂದು ಮೆಟ್ಟಿಲು ಇಳಿದು ಬಂದಿದ್ದ ರಶ್ಮಿಕಾ, ಕಾಂತಾರ ಸಿನಿಮಾ ಬಗ್ಗೆ ಮಾತನಾಡಿ ಟ್ರೋಲ್ಗೆ ಬ್ರೇಕ್ ಹಾಕುವ ಕಾರ್ಯಕ್ಕೆ ಮುಂದಾಗಿದ್ದರು. ಆದರೆ ಸದ್ಯ ಅವರು ದಕ್ಷಿಣ ಭಾರತದ ಸಿನಿಮಾ ರಂಗದ ಕುರಿತಂತೆ ಮಾಡಿರುವ ಕಾಮೆಂಟ್ಸ್, ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ರಶ್ಮಿಕಾ ಮಂದಣ್ಣ ಕಾಮೆಂಟ್ಸ್ ಬಗ್ಗೆ ನೆಟ್ಟಿಗರು ಅಸಮಾಧಾನಗೊಂಡು ಪ್ರತಿಕ್ರಿಯೆ ನೀಡಿದ್ದು, ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದ ನೀವು, ಬಾಲಿವುಡ್ನಲ್ಲಿ ಕೇವಲ ನಾಲ್ಕು ಸಿನಿಮಾ ಮಾಡುತ್ತಿದ್ದಂತೆ ಇಲ್ಲಿನ ಸಿನಿಮಾಗಳನ್ನೇ ಅವಮಾನಿಸುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ. ನೀವು ಹೊಗಳುತ್ತಿರುವ ಬಾಲಿವುಡ್ನಿಂದ ಈ ವರ್ಷ ಎಷ್ಟು ಸಿನಿಮಾಗಳು ಹಿಟ್ ಆಗಿದೆ. ದಕ್ಷಿಣ ಭಾರತದ ಸಿನಿಮಾಗಳ ಹಾಡುಗಳನ್ನು ಎಲ್ಲಾ ಐಟಂ ಹಾಡುಗಳು ಅಂತ ವ್ಯಂಗ್ಯ ಮಾಡ್ತಿದ್ದೀರಾ, ದಕ್ಷಿಣ ಚಿತ್ರರಂಗದಿಂದ ಎಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳು ಬಂದಿದೆ ಅಂತ ಗೊತ್ತಾ ಎಂದು ಪ್ರಶ್ನಿಸಿದ್ದಾರೆ.