ಬಾಲಿವುಡ್‌ನ 'ರಂಗೀಲಾ ಹುಡುಗಿ' ಊರ್ಮಿಳಾ ಮಾತೋಂಡ್ಕರ್ ಅನೇಕ ಹಿಟ್ ಚಿತ್ರಗಳ ಭಾಗವಾಗಿದ್ದಾರೆ. ಒಂದು ಕಾಲದಲ್ಲಿ ಟಾಪ್ ನಟಿಯಾಗಿದ್ದ ಊರ್ಮಿಳಾ ಮಾತೋಂಡ್ಕರ್ ಅವರು ಕಾಶ್ಮೀರದ ಉದ್ಯಮಿ ಮೊಹ್ಸಿನ್ ಅಖ್ತರ್ ಮಿರ್ ಅವರನ್ನು 2016 ರಲ್ಲಿ ವಿವಾಹವಾದರು. 10 ವರ್ಷ ಕಿರಿಯ ಯುವಕನ ಅವರು ವಿವಾಹವಾದರು. ಇತ್ತೀಚಿನ ದಿನಗಳಲ್ಲಿ ಈ ನಟಿ ಚಿತ್ರರಂಗದಿಂದ ದೂರವಾಗಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.