Bollywood Actress: ಇವರೇ ನೋಡಿ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ ಬಾಲಿವುಡ್ ಹೀರೋಯಿನ್ಸ್
ಬಾಲಿವುಡ್ನಿಂದ ಸೌತ್ ಸಿನಿಮಾಗಳಲ್ಲಿ ನಟಿಸಲು ಹೀರೋಯಿನ್ಗಳನ್ನು ಕೆರೆಸುವುದು ಅಂದರೇ ಸುಲಭದ ಮಾತಲ್ಲ. ತಮ್ಮ ಇಮೇಜ್ಗೆ ತಕ್ಕಂತೆ ಸಂಭಾವನೆ ಮತ್ತು ಕ್ಯಾರೇಕ್ಟರ್ ಎರಡು ಸಿನಿಮಾದಲ್ಲಿ ಇರಬೇಕು. ಹೀಗಿದ್ದರೆ ಮಾತ್ರ ಸಿನಿಮಾ ಮಾಡುತ್ತೇವೆ ಎನ್ನುವ ಬಾಲಿವುಡ್ ಹೀರೋಯಿನ್ಸ್ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ನಿಂದ ಸೌತ್ಗೆ ಬಂದು ಇಲ್ಲಿನ ಸಿನಿಮಾಗಳಲ್ಲಿ ಆ್ಟಕ್ಟ್ ಮಾಡಿರುವ ನಟಿಯಲ್ಲಿ ಲಿಸ್ಟ್ ಇಲ್ಲಿದೆ.
News18 Kannada | August 11, 2020, 2:18 PM IST
1/ 12
ಕಹೋ ನಾ ಪ್ಯಾರ್ ಹೈ ಎಂಬ ಹಿಂದಿ ಸಿನಿಮಾ ಮೂಲಕ ಸ್ಟಾರ್ ಪಟ್ಟಕೇರಿದ ಹೀರೋಯಿನ್ ಅಮೀಷ ಪಾಟೀಲ್. ಪವರ್ ಸ್ಡಾರ್ ಪವನ್ ಕಲ್ಯಾನ್ ನಟನೆಯ ಬದ್ರಿ ಸಿನಿಮಾ ಮೂಲಕ ತೆಗುಗೆ ಎಂಟ್ರಿಕೊಟ್ಟರು. ನಂತರ ನರಸಿಂಹುಡು, ನಾನಿ ಪರಮವೀರಚಕ್ರ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು.
2/ 12
ಬಾಲಿವುಡ್ನ ಖ್ಯಾತ ನಟಿ ಪ್ರೀತಿ ಜಿಂಟಾ ಕೂಡ ಮಹೇಶ್ ಬಾಬುಗೆ ಜೋಡಿಯಾಗಿ ರಾಜಕುಮಾರುಡು ಸಿನಿಮಾದಲ್ಲಿ ನಟಿಸಿದ್ದರು. ನಂತರ ವಿಕ್ಟರಿ ವೆಂಕಟೇಶ್ ಜತೆ ಪ್ರೇಮಂಟೆ ಇದೇರಾ ಸಿನಿಮಾದಲ್ಲಿ ಆ್ಯಕ್ಟ್ ಮಾಡಿ ತೆಲುಗ ಜನರಲ್ಲಿ ಮನೆಮಾತಾಗಿದ್ದರು.
3/ 12
ನಟಿ ವಿದ್ಯಾ ಬಾಲನ್ ಬಾಲಯ್ಯ ಜತೆ ಎನ್ಟಿಆರ್ ಬಯೋಪಿಕ್ ಚಿತ್ರದಲ್ಲಿ ಕಾಣಿಸಿಕೊಂಡಿದ್ಧಾರೆ.
4/ 12
ಮಹೇಶ್ ಬಾಬು ನಾಯಕರಾಗಿ ನಟಿಸಿದ ಟಕ್ಕರಿ ದೊಂಗ ಸಿನಿಮಾದಲ್ಲಿ ಲೀಸಾ ರೇ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.
5/ 12
ಸೆಕ್ಸಿ ಹೀರೋಯಿನ್ ಬಿಪಾಷ ಬಸು ಕೂಡ ಟಕ್ಕರಿ ದೊಂಗ ಸಿನಿಮಾದಲ್ಲಿ ಎರಡನೇ ಹೀರೋಯಿನ್ ಆಗಿ ನಟಿಸಿದ್ದಳು.