ತೇಜಸ್ವಿ ಪ್ರಕಾಶ್ ಅವರು ಇತ್ತೀಚೆಗೆ ಕನ್ನಡದಲ್ಲೇ 'ಕಾಂತಾರ' ಚಿತ್ರದ 'ಕರ್ಮ' ಹಾಡನ್ನು ಹೇಳಿ ಸುದ್ದಿಯಲ್ಲಿದ್ದರು. ತೇಜಸ್ವಿಯನ್ನು ಕನ್ನಡಿಗರು ಮೆಚ್ಚಿಕೊಂಡಿದ್ದರು. ನಟಿ ತೇಜಸ್ವಿ ಪ್ರಕಾಶ್ ಅವರು ಹಿಂದಿ ಬಿಗ್ ಬಾಸ್ ಸೀಸನ್ 15ರ ವಿಜೇತೆಯಾಗಿ ಫೇಮಸ್ ಆಗಿದ್ದಾರೆ. ಅವರು ಟ್ರೋಫಿ ಗೆದ್ದಿದ್ದೇ ತಡ ಏಕ್ತಾ ಕಪೂರ್ ತಮ್ಮ ನಾಗಿನ್ ಸೀರಿಯಲ್ ಸಿರೀಸ್‍ಗೆ ತೇಜಸ್ವಿಯನ್ನು ಫಿಕ್ಸ್ ಮಾಡಿದ್ದರು.