Shruti Haasan: ಹಾಲಿವುಡ್ಗೆ ಹಾರಿದ ಶ್ರುತಿ ಹಾಸನ್, ಬಾಲಿವುಡ್ ಬಗ್ಗೆ ಕೊಟ್ರು ಶಾಕಿಂಗ್ ಸ್ಟೇಟ್ಮೆಂಟ್!
Shruti Haasan: ಟಾಲಿವುಡ್, ಕಾಲಿವುಡ್ ನಲ್ಲಿ ನಂ.1 ನಟಿಯಾಗಿ ಮಿಂಚಿದ್ದ ಶ್ರುತಿ ಹಾಸನ್ ಇದೀಗ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಬಾಲಿವುಡ್ ಬಗ್ಗೆ ನಟಿ ಅಸಮಾಧಾನ ಹೊರಹಾಕಿದ್ದಾರೆ.
ನಟಿ ಶ್ರುತಿ ಹಾಸನ್ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಶ್ರುತಿ ಹಾಸನ್ ಬಾಲಿವುಡ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
2/ 8
ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್, ಟಾಲಿವುಡ್, ಕಾಲಿವುಡ್ ಮಾತ್ರವಲ್ಲ ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
3/ 8
ಬಾಲಿವುಡ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತಾಡಿದ ಶ್ರುತಿ, ನಾನು ಯಾರ ಮನಸಿಗೂ ನೋವುಂಟು ಮಾಡಿಲ್ಲ, ಯಾರ ಕೆಲಸವನ್ನೂ ಕದ್ದಿಲ್ಲ, ಆದರೆ ಬಾಲಿವುಡ್ನಲ್ಲಿ ಜನ ನನ್ನನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.
4/ 8
ನಾನು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಾಗ ನನ್ನ ಬಗ್ಗೆ ಒಳ್ಳೆ ಮಾತುಗಳನ್ನ ಹಾಡಲಿಲ್ಲ, ಈಗಲೂ ಅದೇ ಗಾಸಿಪ್ ಮಾಡುತ್ತಿರುವುದಕ್ಕೆ ಧನ್ಯವಾದಗಳು ಎಂದು ಶ್ರುತಿ ಹಾಸನ್ ಹೇಳಿದ್ದಾರೆ.
5/ 8
ಬಾಲಿವುಡ್ಗೆ ಎಂಟ್ರಿ ಕೊಟ್ಟಾಗ ನನ್ನ ಸಿನಿ ಕೆರಿಯರ್ ಇಲ್ಲಿ ಆರಂಭಿಸೋದು ಕೊಂಚ ಕಷ್ಟವಾಗಿತ್ತು ಎಂದು ಶ್ರುತಿ ಹೇಳಿದ್ದಾರೆ.
6/ 8
ಆರಂಭದಲ್ಲಿ ನನಗೆ ಎಂಥಾ ಬಟ್ಟೆ ಹಾಕಿಕೊಂಡು ಹೇಗೆ ಮಾತನಾಡಬೇಕು ಎಂದು ಹೇಳುತ್ತಿದ್ದರು ಎಂದು ಶ್ರುತಿ ಹೇಳಿದ್ದಾರೆ.
7/ 8
ನನಗೆ ಹೇಗೆ ಇಷ್ಟವೋ ನಾನು ಹಾಗೇ ಬದುಕುತ್ತಿದ್ದೇನೆ. ನಾನು ನಿಜ ಜೀವನದಲ್ಲೂ ಹಾಗೆಯೇ ಇದ್ದೇನೆ ನನಗೆ ಇಲ್ಲಿ ನಟಿಸಲು ಇಷ್ಟವಿಲ್ಲ ಎಂದು ಶ್ರುತಿ ಹೇಳಿದ್ದಾರೆ
8/ 8
ಕೊಂಚ ಬ್ರೇಕ್ ಬಳಿಕ ಸಿನಿಮಾಗಳಲ್ಲಿ ನಟಿಸುತ್ತಿರುವ ಶ್ರುತಿ ಹಾಸನ್, ಸದ್ಯ ಹಾಲಿವುಡ್ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ.