ಈ ಬಗ್ಗೆ ಮಾತನಾಡಿರುವ ರೇಖಾ, 'ನಾನು ನನ್ನ ವೃತ್ತಿಜೀವನದಲ್ಲಿ ಆ ಹಂತದಲ್ಲಿಯೇ ಇದ್ದೆ. ನಾನು ಮದುವೆಯಾಗಬೇಕು ಎಂದು ಭಾವಿಸಿದ್ದೆ. ನಾವು ಎಲ್ಲಿ ಭೇಟಿಯಾದೆವು, ಯಾವಾಗ ಭೇಟಿಯಾದೆವು, ಹೇಗೆ ಭೇಟಿಯಾದೆವು ಎಂಬುದು ಮುಖ್ಯವಲ್ಲ. ನಾವು ಭೇಟಿಯಾಗಿದ್ದೆವು. ನಾವು ಮದುವೆಯಾಗಿದ್ದೆವು ಎಂಬುದು ಮುಖ್ಯವಾಗಿತ್ತು. ಈ ಮದುವೆಯಿಂದ ನಾನು ಏನು ಕಲಿತೆ ಅಥವಾ ಕಳೆದುಕೊಂಡಿದ್ದೆ ಎಂದು ತಿಳಿಯುವುದು ಮುಖ್ಯ ಎಂದಿದ್ದರು.