ನೆಟ್ಟಗರು ಲಲಿತ್ ಮೋದಿ ಮತ್ತು ಸುಶ್ಮಿತಾ ಅವರ ಡೇಟಿಂಗ್ ವಿಚಾರ ಕೇಳಿ ಶಾಕ್ ಆಗಿದ್ದಾರೆ. ಅಲ್ಲದೇ ಇವರಿಬ್ಬರ ವಯಸ್ಸು ಸದ್ಯ ಚರ್ಚೆಯಾಗುತ್ತಿದ್ದು, ಸುಶ್ಮಿತಾ ಅವರಿಗೆ ಸದ್ಯ 46 ವರ್ಷವಾಗಿದ್ದು, ಲಲಿತ್ ಮೋದಿ ಅವರಿಗೆ 56 ವರ್ಷ ವಯಸ್ಸಾಗಿದೆ. ಇಬ್ಬರ ನಡುವೆ 10 ವರ್ಷಗಳ ಅಂತರವಿದ್ದು, ಈ ಕುರಿತು ಸುಶ್ಮಿತಾ ಅವರ ತಮ್ಮ ಸಹ ಪ್ರತಿಕ್ರಿಯಿಸಿದ್ದಾರೆ.