ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ನಲ್ಲಿ ಸಕ್ರಿಯರಾಗಿದ್ದಾರೆ. ಆದರೂ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ತಮ್ಮ ಅಪ್‌ಡೇಟ್‌ಗಳನ್ನು ನೀಡುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ತುಂಬಾ ಸಿಂಪಲ್ ಆಗಿ ಕಾಣಿಸಿಕೊಂಡರು, ಸಖತ್ ಕ್ಯೂಟ್ ಆಗಿ ಕಾಣುತ್ತಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಫೋಟೋ ಕಂಡ ನೆಟ್ಟಿಗರು 'ನೀವು ಸಿಂಪಲ್ ಆಗಿ ಇದ್ರೂ, ಸಖತ್ ಹಾಟ್ ಆಗಿ ಕಾಣುತ್ತೀರ ಆದಷ್ಟು ಬೇಗ ಮತ್ತೆ ಹಿಂದಿ ಸಿನಿಮಾದಲ್ಲಿ ನಟಿಸಿ' ಎಂದು ಕಮೆಂಟ್ ಮಾಡಿದ್ದಾರೆ. ಈ ಫೋಟೋಗಳ ಜೊತೆಗೆ ಪ್ರಿಯಾಂಕಾ ಅದರಲ್ಲಿ ಕನ್ನಡಿ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮತ್ತೊಂದು ವಿಷಯ ಅಭಿಮಾನಿಗಳ ಗಮನಕ್ಕೆ ಬಂದಿದೆ. ಹೌದು, ಅದು ಬೇರೆ ಯಾವುದು ಅಲ್ಲ, ಅದು ಪ್ರಿಯಾಂಕಾ ಚೋಪ್ರಾ ಅವರ ಶೂ ಹಾಗೂ ಬ್ಯಾಗ್ಗಳ ಕಲೆಕ್ಷನ್ ಕಂಡು ದಂಗಾಗಿ ಹೋಗಿದ್ದಾರೆ. ನೀವೇ ಒಂದು ಶೋ ರೂಂ ಇಡಬಹುದು ಅಷ್ಟು ಶೂಗಳು ನಿಮ್ಮ ಬಳಿ ಇದೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.