Parineeti-Raghav: ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ನಿಶ್ಚಿತಾರ್ಥಕ್ಕೆ ಬರ್ತಿದ್ದಾರೆ ಗಣ್ಯಾತಿಗಣ್ಯರು! ಫುಡ್ ಮೆನು ಏನಿದೆ?

Bollywood: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ, ರಾಜಕೀಯ ನಾಯಕ ಮತ್ತು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ಸಮಾರಂಭ ಇಂದು (ಮೇ 09) ಸಂಜೆ ನಡೆಯಲಿದೆ. ನಿಶ್ಚಿತಾರ್ಥಕ್ಕೆ ಬರುವ ಅತಿಥಿಗಳು ಯಾರ್ಯಾರು ಗೊತ್ತಾ?

First published:

  • 18

    Parineeti-Raghav: ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ನಿಶ್ಚಿತಾರ್ಥಕ್ಕೆ ಬರ್ತಿದ್ದಾರೆ ಗಣ್ಯಾತಿಗಣ್ಯರು! ಫುಡ್ ಮೆನು ಏನಿದೆ?

    pri ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಆಪ್ ಸಂಸದ ರಾಘವ್ ಚಡ್ಡಾ ಪ್ರೀತಿ ಇದೀಗ ಮದುವೆ ಹಂತಕ್ಕೆ ತಲುಪಿದೆ, ಎಂಗೇಜ್​ಮೆಂಟ್ ಬಳಿಕ ಮದುವೆ ಆಗಲು ರೆಡಿಯಾಗಿದ್ದಾರೆ. ಈ ಜೋಡಿ ನಿಶ್ಚಿತಾರ್ಥ ಕೂಡ ಅದ್ಧೂರಿಯಾಗಿ ನಡೆಯಲಿದೆ.

    MORE
    GALLERIES

  • 28

    Parineeti-Raghav: ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ನಿಶ್ಚಿತಾರ್ಥಕ್ಕೆ ಬರ್ತಿದ್ದಾರೆ ಗಣ್ಯಾತಿಗಣ್ಯರು! ಫುಡ್ ಮೆನು ಏನಿದೆ?

    ಮುಂಬೈನ ಬಾಂದ್ರಾದಲ್ಲಿರುವ ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾ ಮನೆಯಲ್ಲಿ ನಿಶ್ಚಿತಾರ್ಥದ ತಯಾರಿ ಶುರುವಾಗಿದೆ. ಎರಡು ದಿನಗಳಿಂದ ಮನೆಯು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ದೆಹಲಿಯಲ್ಲಿರುವ ಸಂಸದ ರಾಘವ್ ಚಡ್ಡಾ ಅವರ ಅಧಿಕೃತ ನಿವಾಸವನ್ನು ಸಹ ದೀಪ ಮತ್ತು ಹೂವುಗಳಿಂದ ಅಲಂಕರಿಸಲಾಗಿದೆ. ಈ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    MORE
    GALLERIES

  • 38

    Parineeti-Raghav: ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ನಿಶ್ಚಿತಾರ್ಥಕ್ಕೆ ಬರ್ತಿದ್ದಾರೆ ಗಣ್ಯಾತಿಗಣ್ಯರು! ಫುಡ್ ಮೆನು ಏನಿದೆ?

    ಶನಿವಾರ ನವದೆಹಲಿಯ ಕಪುರ್ತಲಾ ಹೌಸ್ನಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ರಾಘವ್-ಪರಿಣಿತಿ ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ. ಅವರ ನಿಶ್ಚಿತಾರ್ಥ ಸಮಾರಂಭವು ಸಾಂಪ್ರದಾಯಿಕ ಸಿಖ್ ಪ್ರಾರ್ಥನಾ ಭಾಷಣದೊಂದಿಗೆ ಪ್ರಾರಂಭವಾಗುತ್ತದೆ ಎಂದು ವರದಿಯಾಗಿದೆ.

    MORE
    GALLERIES

  • 48

    Parineeti-Raghav: ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ನಿಶ್ಚಿತಾರ್ಥಕ್ಕೆ ಬರ್ತಿದ್ದಾರೆ ಗಣ್ಯಾತಿಗಣ್ಯರು! ಫುಡ್ ಮೆನು ಏನಿದೆ?

    ರಾಘವ್-ಪರಿಣಿತಿ ನಿಶ್ಚಿತಾರ್ಥ ಕಾರ್ಯಕ್ರಮ ಶನಿವಾರ ಸಂಜೆ 6 ಗಂಟೆಗೆ ಸುಖಮಣಿ ಸಾಹಿಬ್ ಅವರೊಂದಿಗೆ ಅರ್ದಾಸ್ ನಂತರ ಪ್ರಾರಂಭವಾಗಲಿದೆ. ಶುಕುಮಣಿ ಸಾಹಿಬ್ ಅವರು ಸಿಖ್ ಧರ್ಮಗ್ರಂಥದ ಗುರು ಗ್ರಂಥ ಸಾಹಿಬ್​ನ ಒಂದು ಭಾಗವನ್ನು ಪಠಿಸುತ್ತಾರೆ. ಆಗ ಪ್ರಾರ್ಥನೆ ಆರಂಭವಾಗುತ್ತದೆ.

    MORE
    GALLERIES

  • 58

    Parineeti-Raghav: ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ನಿಶ್ಚಿತಾರ್ಥಕ್ಕೆ ಬರ್ತಿದ್ದಾರೆ ಗಣ್ಯಾತಿಗಣ್ಯರು! ಫುಡ್ ಮೆನು ಏನಿದೆ?

    ಪ್ರಾರ್ಥನೆ ನಂತರ ರಾಘವ್-ಪರಿಣಿತಿ ಉಂಗುರಗಳನ್ನು ಬದಲಾಯಿಸಿಕೊಳ್ಳುತ್ತಾರೆ. ರಾಜಮನೆತನದ ನಿಶ್ಚಿತಾರ್ಥ ಇದಾಗಿದ್ದು, ಅತಿಥಿಗಳಿಗಾಗಿ ಭೋರಿ ಭೋಜನವನ್ನೇ ಏರ್ಪಡಿಸಲಾಗಿದೆ. ಬಗೆ ಬಗೆಯ ಖಾದ್ಯಗಳು ತಯಾರಾಗಿದೆ.

    MORE
    GALLERIES

  • 68

    Parineeti-Raghav: ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ನಿಶ್ಚಿತಾರ್ಥಕ್ಕೆ ಬರ್ತಿದ್ದಾರೆ ಗಣ್ಯಾತಿಗಣ್ಯರು! ಫುಡ್ ಮೆನು ಏನಿದೆ?

    ಒಬ್ಬರು ರಾಜಕಾರಣಿ ಮತ್ತೊಬ್ಬರು ಬಾಲಿವುಡ್ ನಟಿಯಾದ್ದರಿಂದ ಇವರಿಬ್ಬರ ನಿಶ್ಚಿತಾರ್ಥಕ್ಕೆ ಯಾರನ್ನು ಆಹ್ವಾನಿಸಲಾಗಿದೆ? ಯಾರು ಬರುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈ ನಿಶ್ಚಿತಾರ್ಥಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಗಮಿಸುತ್ತಿದ್ದಾರೆ. 

    MORE
    GALLERIES

  • 78

    Parineeti-Raghav: ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ನಿಶ್ಚಿತಾರ್ಥಕ್ಕೆ ಬರ್ತಿದ್ದಾರೆ ಗಣ್ಯಾತಿಗಣ್ಯರು! ಫುಡ್ ಮೆನು ಏನಿದೆ?

    ಅಲ್ಲದೇ ಬಾಲಿವುಡ್ ನಿಂದ ಸ್ಟಾರ್ ಪ್ರೊಡ್ಯೂಸರ್ ಕರಣ್ ಜೋಹರ್ ಹಾಗೂ ಮನೀಶ್ ಮಲ್ಹೋತ್ರಾ ಬರುತ್ತಿದ್ದಾರೆ. ಪರಿಣಿತಿ ಮತ್ತು ರಾಘವ್ ಅವರ ನಿಶ್ಚಿತಾರ್ಥ ಸಮಾರಂಭಕ್ಕೆ ಸಾನಿಯಾ ಮಿರ್ಜಾ ಅವರನ್ನು ಸಹ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ.

    MORE
    GALLERIES

  • 88

    Parineeti-Raghav: ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ನಿಶ್ಚಿತಾರ್ಥಕ್ಕೆ ಬರ್ತಿದ್ದಾರೆ ಗಣ್ಯಾತಿಗಣ್ಯರು! ಫುಡ್ ಮೆನು ಏನಿದೆ?

    ನಿಶ್ಚಿತಾರ್ಥಕ್ಕಾಗಿ ಪರಿಣಿತಿ ಸಹೋದರಿ ಪ್ರಿಯಾಂಕಾ ಚೋಪ್ರಾ ಸಹ ಮಗಳ ಜೊತೆ ಭಾರತಕ್ಕೆ ಬಂದಿಳಿದಿದ್ದಾರೆ. ಪರಿಣಿತಿ ಅವರ ಆಪ್ತ ಬಾಲಿವುಡ್ ತಾರೆಯರು ಕೂಡ ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಾರಂಭಕ್ಕೆ ಸುಮಾರು 150 ಅತಿಥಿಗಳನ್ನು ಆಹ್ವಾನಿಸಲಾಗಿದೆಯಂತೆ. ಈಗಾಗಲೇ ಕೆಲವು ಆಪ್ತರು ಸಾಮಾಜಿಕ ಜಾಲತಾಣಗಳ ಮೂಲಕ ತಾರಾ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

    MORE
    GALLERIES