Kantara-Kangana Ranaut: ಕಾಂತಾರ ಸಿನಿಮಾ ನೋಡೋಕೆ ಕುತೂಹಲ ತಡೆಯೋಕಾಗ್ತಿಲ್ಲ ಎಂದ ಕಂಗನಾ
Kantara: ನಟಿ ಕಂಗನಾ ರಣಾವತ್ ಕಾಂತಾರ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕಾಂತಾರ ಬಗ್ಗೆ ಸಿಕ್ಕಾಪಟ್ಟೆ ವಿಷಯಗಳನ್ನು ಕೇಳುತ್ತಿದ್ದೇನೆ. ಸಿನಿಮಾ ನೋಡೋಕೆ ಕುತೂಹಲ ತಡೆಯಲಾಗುತ್ತಿಲ್ಲ ಎಂದಿದ್ದಾರೆ.
ಕನ್ನಡದ ಆಕ್ಷನ್ ಡ್ರಾಮಾ ಕಾಂತಾರ ತನ್ನ ಕುತೂಹಲಕಾರಿ ನಿರೂಪಣೆಯಿಂದ ದೇಶ ಮಾತ್ರವಲ್ಲ ವಿದೇಶದಲ್ಲಿಯೂ ಹವಾ ಸೃಷ್ಟಿಸಿದೆ.
2/ 6
ರಿಷಬ್ ಶೆಟ್ಟಿ ಸಿನಿಮಾ ಸಿಕ್ಕಾಪಟ್ಟೆ ವೈರಲ್ ಆಗಿದ್ದು ತನ್ನ ವಿಭಿನ್ನ ಸ್ಟೋರಿ ಸ್ಟೈಲ್ನಿಂದಾಗಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಬಾಕ್ಸ್ ಆಫೀಸ್ನಲ್ಲಿಯೂ ಹಿಟ್ ಆಗಿದೆ.
3/ 6
ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅಪಾರವಾಗಿ ಮೆಚ್ಚುಗೆ ಗಳಿಸುತ್ತಿದ್ದು ಸೆಲೆಬ್ರಿಟಿಗಳೂ ಸಿನಿಮಾವನ್ನು ನೋಡಿ ಟ್ವೀಟ್ ಮಾಡುತ್ತಿದ್ದಾರೆ.
4/ 6
ಅನಿಲ್ ಕುಂಬ್ಳೆ, ಪ್ರಶಾಂತ್ ನೀಲ್, ಪೃಥ್ವಿರಾಜ್ ಸುಕುಮಾರನ್, ಧನುಷ್, ರಾಣಾ ದಗ್ಗುಬಾಟಿ ಮುಂತಾದವರು ಚಿತ್ರವನ್ನು ಹೊಗಳಿದ ನಂತರ, ನಟಿ ಕಂಗನಾ ರಣಾವತ್ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
5/ 6
ಕಾಂತಾರ ಬಗ್ಗೆ ಅಸಾಧಾರಣವಾದ ವಿಷಯಗಳನ್ನು ಕೇಳುತ್ತಿದ್ದೇನೆ ಎಂದಿದ್ದಾರೆ ಕಂಗನಾ. ಕಾಂತಾರ ಬಗ್ಗೆ ಅಸಾಧಾರಣವಾದ ವಿಷಯಗಳನ್ನು ಕೇಳುತ್ತಿದ್ದು ಸಿನಿಮಾ ನೋಡಲು ಕುತೂಹಲ ಹೆಚ್ಚಾಗಿದೆ. ಇನ್ನೂ ಕಾಯಲು ಸಾಧ್ಯವಿಲ್ಲ ಎಂದಿದ್ದಾರೆ.
6/ 6
ರಿಷಬ್ ಶೆಟ್ಟಿ ಸಿನಿಮಾ ಈಗಾಗಲೇ 100 ಕೋಟಿ ಗಡಿ ಸಮೀಪಿಸಿದ್ದು ಈಗ ಬೇರೆ ಭಾಷೆಗಳಲ್ಲಿ ರಿಲೀಸ್ ಆಗಿದ್ದು ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ.