ಪ್ರಸ್ತುತ ಜಾನ್ವಿ ಕಪೂರ್ ದೋಸ್ತಾನಾ 2, ಗುಡ್ ಲಕ್ ಜೆರ್ರಿ, ಹೆಲೆನ್, ಮಿಸ್ಟರ್ ಅಂಡ್ ಮಿಸಸ್ ಮಹಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಒಂದೆಡೆ ಬಾಲಿವುಡ್ನಲ್ಲಿ ಸದ್ದು ಮಾಡುತ್ತಿರುವ ಈ ನಟಿ ಮತ್ತೊಂದೆಡೆ ದಕ್ಷಿಣದತ್ತಲೂ ಗಮನ ಹರಿಸುತ್ತಿದ್ದಾರೆ. ಜಾನ್ವಿ ಜೂನಿಯರ್ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.