Bollywood Actresses: ಜಿರಾಫೆ, ಆಲೂ, ಗೋಲೂ! ಈ ಟಾಪ್ ನಟಿಯರ ಅಡ್ಡ ಹೆಸರು ಫನ್ನಿಯಾಗಿದೆ

ಎಲ್ಲರಿಗೂ ಹೆಸರಿನ ಜೊತೆಗೆ ಇನ್ನೊಂದು ಮನೆಯಲ್ಲೇ ಬಳಸುವ ಆಪ್ತರು ಬಳಸುವ ಹೆಸರು ಇರುತ್ತದೆ. ಎಲ್ಲರಿಗೂ ಒಂದಾದರೂ ಅಡ್ಡಹೆಸರು ಇರುತ್ತದೆ. ತಮ್ಮ ಅಡ್ಡಹೆಸರುಗಳಿಂದಾಗಿ ಉದ್ಯಮದಲ್ಲಿ ಜನಪ್ರಿಯವಾಗಿರುವ ಅನೇಕ ಬಾಲಿವುಡ್ ಸೆಲೆಬ್ರಿಟಿಗಳಿದ್ದಾರೆ. ಗ್ಲಾಮರ್ ಜಗತ್ತನ್ನು ಆಳುವ ಐಶ್ವರ್ಯಾ ರೈನಿಂದ ತೊಡಗಿ ಆಲಿಯಾ ಭಟ್ ತನಕ ಎಲ್ಲರಿಗೂ ಒಂದೊಂದು ಹೆಸರಿದೆ.

First published:

  • 19

    Bollywood Actresses: ಜಿರಾಫೆ, ಆಲೂ, ಗೋಲೂ! ಈ ಟಾಪ್ ನಟಿಯರ ಅಡ್ಡ ಹೆಸರು ಫನ್ನಿಯಾಗಿದೆ

    ಪೋಷಕರು ಖಂಡಿತವಾಗಿಯೂ ಮಕ್ಕಳಿಗೆ ಅಡ್ಡಹೆಸರನ್ನು ಇಡುತ್ತಾರೆ. ಪ್ರೀತಿಯಿಂದ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಕೆಲವು ವಿಶೇಷ ಹೆಸರಿನಿಂದ ಕರೆಯುತ್ತಾರೆ. ಬಾಲಿವುಡ್ ತಾರೆಯರು ಕೂಡ ಇದಕ್ಕೆ ಹೊರತಲ್ಲ.

    MORE
    GALLERIES

  • 29

    Bollywood Actresses: ಜಿರಾಫೆ, ಆಲೂ, ಗೋಲೂ! ಈ ಟಾಪ್ ನಟಿಯರ ಅಡ್ಡ ಹೆಸರು ಫನ್ನಿಯಾಗಿದೆ

    ಕಪೂರ್ ಕುಟುಂಬದ ಹೆಣ್ಣುಮಕ್ಕಳಾದ ಕರಿಷ್ಮಾ ಕಪೂರ್ ಮತ್ತು ಕರೀನಾ ಕಪೂರ್ ಅವರ ಅಡ್ಡಹೆಸರುಗಳು ಬಹಳ ಜನಪ್ರಿಯವಾಗಿವೆ. ಅನುಷ್ಕಾ ಶರ್ಮಾ, ಆಲಿಯಾ ಭಟ್, ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ ಅವರಂತಹ ನಟಿಯರ ಅಡ್ಡಹೆಸರುಗಳು ಫನ್ನಿಯಾಗಿವೆ.

    MORE
    GALLERIES

  • 39

    Bollywood Actresses: ಜಿರಾಫೆ, ಆಲೂ, ಗೋಲೂ! ಈ ಟಾಪ್ ನಟಿಯರ ಅಡ್ಡ ಹೆಸರು ಫನ್ನಿಯಾಗಿದೆ

    ಬಾಲಿವುಡ್ ಹಾಗೂ ಹಾಲಿವುಡ್​ನಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾಗೆ ಒಂದು ಅಡ್ಡಹೆಸರಿದೆ. ಚಿತ್ರದ ಹಾಡುಗಳಿಂದ ಪ್ರಿಯಾಂಕಾ ಅವರನ್ನು ಅಭಿಮಾನಿಗಳು ದೇಸಿ ಗರ್ಲ್ ಎಂದು ಕರೆಯುತ್ತಾರೆ. ಆದರೆ ಕೆಲವು ಆಪ್ತರು ಅವರನ್ನು ಪಿಗ್ಗಿ ಚಾಪ್ಸ್ ಎಂದೂ ಕರೆಯುತ್ತಾರೆ. ಪ್ರಿಯಾಂಕಾ ಪೋಷಕರು ಅವರನ್ನು ಮಿಥು ಎಂದು ಕರೆಯುತ್ತಾರೆ. ಕೆಲವರು ಅವಳನ್ನು ಮಿಮಿ ಎಂದೂ ಕರೆಯುತ್ತಾರೆ.

    MORE
    GALLERIES

  • 49

    Bollywood Actresses: ಜಿರಾಫೆ, ಆಲೂ, ಗೋಲೂ! ಈ ಟಾಪ್ ನಟಿಯರ ಅಡ್ಡ ಹೆಸರು ಫನ್ನಿಯಾಗಿದೆ

    ವಿಶ್ವ ಸುಂದರಿ ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈ ಅವರ ನಿಕ್ ನೇಮ್ ಕೂಡ ತಮಾಷೆಯಾಗಿದೆ. ಬಾಲ್ಯದಲ್ಲಿ ಮಗಳ ಮುದ್ದಾಗಿ ನೋಡಿದ ಕುಟುಂಬಸ್ಥರು ಆಕೆಯನ್ನು ಗುಲ್ಲು ಎಂದು ಕರೆಯುತ್ತಾರೆ. ಈಗಲೂ ಅವರ ಆಪ್ತರು ಅವರನ್ನು ಗುಲ್ಲು ಎಂದೇ ಕರೆಯುತ್ತಾರೆ.

    MORE
    GALLERIES

  • 59

    Bollywood Actresses: ಜಿರಾಫೆ, ಆಲೂ, ಗೋಲೂ! ಈ ಟಾಪ್ ನಟಿಯರ ಅಡ್ಡ ಹೆಸರು ಫನ್ನಿಯಾಗಿದೆ

    ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸೋನಂ ಅವರನ್ನು ಮನೆಯಲ್ಲಿ ಜಿರಾಫೆ ಎಂದು ಪ್ರೀತಿಯಿಂದ ಕರೆಯುತ್ತಾರೆ. ಸಂದರ್ಶನವೊಂದರಲ್ಲಿ, ಸೋನಂ ಸ್ವತಃ 'ನನ್ನ ಕುತ್ತಿಗೆ ತುಂಬಾ ಉದ್ದವಾಗಿದೆ, ಅದಕ್ಕಾಗಿಯೇ ನನ್ನ ತಂದೆ ನನ್ನನ್ನು ಜಿರಾಫೆ ಎಂದು ಕರೆಯುತ್ತಿದ್ದರು ಎಂದಿದ್ದಾರೆ.

    MORE
    GALLERIES

  • 69

    Bollywood Actresses: ಜಿರಾಫೆ, ಆಲೂ, ಗೋಲೂ! ಈ ಟಾಪ್ ನಟಿಯರ ಅಡ್ಡ ಹೆಸರು ಫನ್ನಿಯಾಗಿದೆ

    ಅನುಷ್ಕಾ ಶರ್ಮಾ ಹೆಸರು ಕೇಳಿದರೂ ನಗು ಬರುವುದು ಖಚಿತ. ಬಾಲ್ಯದಲ್ಲಿ ಅನುಷ್ಕಾ ಅವರನ್ನು ‘ನುಷ್ಕೇಶ್ವರ್’ ಎಂದು ಕರೆಯುತ್ತಿದ್ದರು. ಅನುಷ್ಕಾ ಬೆಳೆದ ನಂತರ, ಈ ಹೆಸರನ್ನು ನುಷ್ಕಿ ಎಂದು ಬದಲಾಯಿಸಿ ಕರೆಯುತ್ತಿದ್ದರು. ವಿರಾಟ್ ಕೊಹ್ಲಿ ಕೂಡ ಅನುಷ್ಕಾ ಅವರನ್ನು ನುಷ್ಕಿ ಎಂದೇ ಕರೆಯುತ್ತಾರೆ.

    MORE
    GALLERIES

  • 79

    Bollywood Actresses: ಜಿರಾಫೆ, ಆಲೂ, ಗೋಲೂ! ಈ ಟಾಪ್ ನಟಿಯರ ಅಡ್ಡ ಹೆಸರು ಫನ್ನಿಯಾಗಿದೆ

    ಬಾಲಿವುಡ್ ನಟಿ ಆಲಿಯಾ ಭಟ್ ಈಗ ಕಪೂರ್ ಕುಟುಂಬದ ಸೊಸೆಯಾಗಿದ್ದಾಳೆ. ಆದರೆ ಅವರ ತಾಯಿ ಸೋನಿ ರಜ್ದಾನ್ ಮತ್ತು ಮಹೇಶ್ ಭಟ್ ಅವರಿಗೆ ಇಗಲೂ ಆಲೂ ಎಂದೇ ಕರೆಯುತ್ತಾರೆ.

    MORE
    GALLERIES

  • 89

    Bollywood Actresses: ಜಿರಾಫೆ, ಆಲೂ, ಗೋಲೂ! ಈ ಟಾಪ್ ನಟಿಯರ ಅಡ್ಡ ಹೆಸರು ಫನ್ನಿಯಾಗಿದೆ

    ರಣಧೀರ್ ಕಪೂರ್ ಅವರ ಮುದ್ದು ಮಗಳು ಕರಿಷ್ಮಾ ಕಪೂರ್ ಅವರನ್ನು ಬಾಲ್ಯದಿಂದಲೂ ಲೋಲೋ ಎಂದು ಕರೆಯುತ್ತಾರೆ. ಈ ಹೆಸರು ಬಾಲಿವುಡ್ ಇಂಡಸ್ಟ್ರಿಯಲ್ಲಿ ಜನಪ್ರಿಯವಾಗಿದೆ. ಲೋಲೋ ಎಂದರೆ ಅದು ಕರಿಷ್ಮಾ ಹೆಸರು ಎಂದು ಜನರು ಅರ್ಥಮಾಡಿಕೊಳ್ಳುತ್ತಾರೆ.

    MORE
    GALLERIES

  • 99

    Bollywood Actresses: ಜಿರಾಫೆ, ಆಲೂ, ಗೋಲೂ! ಈ ಟಾಪ್ ನಟಿಯರ ಅಡ್ಡ ಹೆಸರು ಫನ್ನಿಯಾಗಿದೆ

    ಕರೀನಾ ಕಪೂರ್ ಅವರನ್ನು ಬೆಬೋ ಎಂದು ಕರೆಯಲಾಗುತ್ತದೆ. ಕರೀನಾ ಬಾಲಿವುಡ್ ಮಂದಿ ಮತ್ತು ಅಭಿಮಾನಿಗಳ ಮಧ್ಯೆ ಈಗಲೂ ಬೆಬೋ ಆಗಿ ಜನಪ್ರಿಯರಾಗಿದ್ದಾರೆ.

    MORE
    GALLERIES