Bhagyashree: ಕಂಗನಾ ತಾಯಿಯಾಗಿ ಶಿವಣ್ಣನ ನಟಿ: ಸೀತಾರಾಮ ಕಲ್ಯಾಣದ ಬಳಿಕ ತಮಿಳು ಚಿತ್ರದಲ್ಲಿ ಭಾಗ್ಯಶ್ರೀ
80ರ ದಶಕದಲ್ಲಿ ಮೈನೇ ಪ್ಯಾರ್ ಕಿಯಾ ಚಿತ್ರದ ಮೂಲಕ ಪಡ್ಡೆಗಳ ಹೃದಯ ಗೆದ್ದಿದ್ದ ನಟಿ ಭಾಗ್ಯಶ್ರೀ. ಬಳಿಕ ಕನ್ನಡದಲ್ಲಿ ಅಮ್ಮಾವ್ರ ಗಂಡ ಸಿನಿಮಾ ಮೂಲಕ ಶಿವರಾಜ್ ಕುಮಾರ್ಗೆ ನಾಯಕ ನಟಿಯಾಗಿ ಮಿಂಚಿದ್ದರು. ಮದುವೆಯಾದ ಬಳಿಕ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದ ಭಾಗ್ಯ ಶ್ರೀ 2019ರಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿನಯ ಸೀತಾರಾಮ ಕಲ್ಯಾಣದಲ್ಲಿ ಮಿಂಚಿದ್ದರು. ಇದಾದ ಬಳಿಕ ಈಗ ತಮಿಳಿನಲ್ಲಿ ತಲೈವಿ ಅಮ್ಮನಾಗಿ ನಟಿಸಿದ್ದಾರೆ.