Alia Bhatt: ಮತ್ತೆ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗ್ತಿದ್ದಾರೆ ಆಲಿಯಾ ಭಟ್! ಯಾವ ಸಿನಿಮಾ?
ಬಾಲಿವುಡ್ ನಟಿ ಆಲಿಯಾ ಭಟ್ ಸಿನಿಮಾ ಕೆಲಸದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ರು. ಸದ್ಯ ನಟಿ ಆಲಿಯಾ ತನ್ನ ಮಗಳು ರಾಹಾ ಕಪೂರ್ ಜೊತೆ ಸಮಯ ಕಳೆಯಲು ಮುಂದಾಗಿದ್ದಾರೆ.
1/ 8
ಹೆರಿಗೆ ಬಳಿಕ ಬಾಲಿವುಡ್ ನಟಿ ಆಲಿಯಾ ಭಟ್ ಮಗಳು ರಾಹಾ ಕಪೂರ್ ಲಾಲನೆ-ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.
2/ 8
ಬ್ರಹ್ಮಾಸ್ತ್ರ ಸಿನಿಮಾ ಬಳಿಕ ತಾಯಿಯಾದ ಖುಷಿಯಲ್ಲಿರುವ ಆಲಿಯಾ ಭಟ್, ಮಗಳಿಗೆ ಹಾಲುಣಿಸುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಕೂಡ ಮಾಡಿದ್ರು.
3/ 8
ತಮ್ಮ ಅಭಿಮಾನಿಗಳಿಗೆ ತಾಯ್ತನವನ್ನು ಹೇಗೆ ಆನಂದಿಸುತ್ತಿದ್ದಾರೆಂದು ಫೋಟೋ ಮೂಲಕ ಆಲಿಯಾ ಭಟ್ ತಿಳಿಸಿದ್ದಾರೆ.
4/ 8
ಇತ್ತೀಚೆಗೆ ಆಲಿಯಾ ವ್ಯಾಯಾಮ ಮತ್ತು ಯೋಗ ಮಾಡುವ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
5/ 8
ಯೋಗ ಮಾಡ್ತಾ ಫಿಟ್ನೆಸ್ ಬಗ್ಗೆ ಗಮನಹರಿಸಿರುವ ಆಲಿಯಾ ಭಟ್ ಶೀಘ್ರದಲ್ಲೇ ಸಿನಿಮಾ ಶೂಟಿಂಗ್ನಲ್ಲಿ ತನ್ನನ್ನು ತೊಡಗಿಸಿಕೊಳ್ತಾರೆ ಎನ್ನಲಾಗಿದೆ.
6/ 8
ಆಲಿಯಾ ಭಟ್ ಶೀಘ್ರದಲ್ಲೇ ಚಲನಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರ ಬೈಜು ಬಾವ್ರಾ ಶೂಟಿಂಗ್ನಲ್ಲಿ ಭಾಗವಹಿಸಲಿದ್ದಾರಂತೆ.
7/ 8
ಇದು ಆಲಿಯಾ ಭಟ್ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರ 2ನೇ ಸಿನಿಮಾ ಆಗಿದೆ. ಈ ಹಿಂದೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಥಿವಾಡಿ ಚಿತ್ರದಲ್ಲಿ ಆಲಿಯಾ ನಟಿಸಿದ್ದರು.
8/ 8
ರಾಹಾ ಹುಟ್ಟಿದ 3 ತಿಂಗಳಲ್ಲಿ ಆಲಿಯಾ ಸಿನಿಮಾ ಕೆಲಸದತ್ತ ಮನಸ್ಸು ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
First published: