ಆಲಿಯಾ ಭಟ್ ಅವರು 1999ರ ಥ್ರಿಲ್ಲರ್ ಸಂಘರ್ಷ ಎಂಬ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ ನಂತರ, ಅವರು ಕರಣ್ ಜೋಹರ್ ರವರ ಸ್ಟೂಡೆಂಟ್ ಆಫ್ ದಿ ಇಯರ್ ನಲ್ಲಿ ತನ್ನ ಮೊದಲ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. 2 ಸ್ಟೇಟ್ಸ್, ಹಂಪ್ಟಿ ಶರ್ಮಾ ಕಿ ದುಲ್ಹಾನಿಯಾ ಮತ್ತು ಬದ್ರಿನಾಥ್ ಕಿ ದುಲ್ಹಾನಿಯಾ ಸೇರಿದಂತೆ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದ ಹಲವಾರು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.
ಆಲಿಯಾ ಅವರು ಹೈವೇ ಎಂಬ ಸಿನಿಮಾದಲ್ಲಿ ಅಪಹರಣಕ್ಕೊಳಗಾದವರ ಪಾತ್ರದಲ್ಲಿ ಅಭಿನಯಿಸಿದ್ದಕ್ಕಾಗಿ ಅತ್ಯುತ್ತಮ ನಟಿಗಾಗಿ ಫಿಲ್ಮ್ ಫೇರ್ ಕ್ರಿಟಿಕ್ಸ್ ಪ್ರಶಸ್ತಿ ಮತ್ತು ಉಡ್ತಾ ಪಂಜಾಬ್ ಎಂಬ ಕ್ರೈಮ್ ಸಿನಿಮಾದಲ್ಲಿ ಬಿಹಾರಿ ವಲಸಿಯಾಗಿ ನಟಿಸಿದ್ದ ಪಾತ್ರಕ್ಕಾಗಿ ಎರಡು ಅತ್ಯುತ್ತಮ ನಟಿ ಪ್ರಶಸ್ತಿ, ಹಿಂದಿ ಸಿನಿಮಾದಲ್ಲಿ ಅತಿ ಹೆಚ್ಚು ಗಳಿಕೆಯ ಮಹಿಳಾ ನೇತೃತ್ವದ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು ಮತ್ತು ಗಲ್ಲಿ ಬಾಯ್ ಎಂಬ ಸಿನಿಮಾದಿಂದ ಕೂಡ ಅವರ ಪ್ರಸಿದ್ಧಿಯನ್ನು ಹೆಚ್ಚಿಸಿತು.