ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಅವರು ಒಂದಾನೊಂದು ಕಾಲದಲ್ಲಿ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.
2/ 9
ಸುಶ್ಮಿತಾ ಸೇನ್ ತಮ್ಮ ವರ್ಕೌಟ್ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿ ಬಿಡುತ್ತಿರುತ್ತಾರೆ. ಇತ್ತೀಚೆಗೆ ತಮ್ಮ ಆರೋಗ್ಯದ ಪರಿಸ್ಥಿತಿಯ ಬಗ್ಗೆ ತಿಳಿಸುತ್ತಾ, ಅಪರೂಪದ ಕಾಯಿಲೆಯಿಂದ ಹೊರ ಬಂದಿದ್ದೇನೆ ಎಂದು ಹೇಳಿದ್ದಾರೆ.
3/ 9
ನಾನ್ಚಾಕ್ ಪ್ರಾಕ್ಟೀಸ್ ಮಾಡುತ್ತಾ ನಾನು ಆರೋಗ್ಯವಂತ ಮಹಿಳೆಯಾಗಿ ಬದಲಾದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ನಮ್ಮ ಆರೋಗ್ಯ ಬಗ್ಗೆ ನಮಗಿಂತ ಚೆನ್ನಾಗಿ ಬೇರೆ ಯಾರಿಗೂ ಗೊತ್ತಿರುವುದಿಲ್ಲ. ಆದಕಾರಣ ಆರೋಗ್ಯವಾಗಿ ಇರಬೇಕು ಎಂದಾದರೆ ಅದರ ಮಾತನ್ನು ನಾವು ಮೊದಲು ಕೇಳಬೇಕು ಎಂದಿದ್ದಾರೆ.
4/ 9
ಸುಶ್ಮಿತಾ ಸೇನ್ 2014 ಸೆಪ್ಟೆಂಬರ್ನಲ್ಲಿ ಅಡಿಸನ್ ಕಾಯಿಯಿಂದ ಬಳತ್ತಿದ್ದರು. ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಸಂಪೂರ್ಣ ನಶಿಸಿತ್ತು. ರೋಗದೊಂದಿಗೆ ಹೋರಾಡಲು ಶಕ್ತಿಯಿಲ್ಲದೆ, ನಿತ್ರಾಣಗೊಂಡಿದ್ದೆ ಎಂದು ಹೇಳಿದ್ದಾರೆ.
5/ 9
ಆ ಸಮಯದಲ್ಲಿ ನನ್ನ ಕಣ್ಣಿ ಸುತ್ತಲು ಕಪ್ಪು ಕಲೆಗಳು ಕಾಣಿಸಿಕೊಂಡವು. ನಾಲ್ಕು ವರ್ಷಗಳ ಕಾಲ ಆ ಕಾಯಿಲೆ ವಿರುದ್ಧ ಹೋರಾಟ ಮಾಡಿ ಹೊರಬರಲು ಎಷ್ಟು ಪ್ರಯತ್ನ ಮಾಡಿದೆನೆಂದರೆ ಅದನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
6/ 9
ಅಡಿಸನ್ ಕಾಯಿಲೆಯಿಂದ ಹೊರಬರಲು ಸ್ಟೆರಾಯ್ಡ್ ತೆಗೆದುಕೊಂಡೆ. ಆದರೆ ಅಡ್ಡ ಪರಿಣಾಗಳು ಉಂಟಾಯಿತು. ನಂತರ ದಿನಗಳಲ್ಲಿ ಅನಾರೋಗಿಯಾಗಿ ಬದಕಬೇಕೆ ಎಂದುಕೊಂಡಿದ್ದೆ.
7/ 9
ಇಂತಹ ಸಂದರ್ಭದಲ್ಲಿ ನಾನು ಮನಸ್ಸು ಗಟ್ಟಿ ಮಾಡಿಕೊಂಡೆ. ಆಯೋಗ್ಯವಾಗಿ ಬದುಕ ಬೇಕು ಎಂದು ಪ್ರಯತ್ನಪಟ್ಟೆ. ನಾನ್ಚೆಕ್ ಪ್ರಾಕ್ಟೀಸ್ ಮಾಡುತ್ತಾ ರೋಗದಿಂದ ಗುಣಮುಖ ಆಗುತ್ತಾ ಬಂದೆ. 2019ರ ಹೊತ್ತಿಗೆ ಮತ್ತೆ ಸರಿಯಾದ ಸ್ಥಿತಿಗೆ ಬಂದೆ ಎಂದು ತನ್ನ ಆರೋಗ್ಯದ ಬಗ್ಗೆ ಹೇಳಿಕೊಂಡಿದ್ದಾರೆ ಸುಶ್ಮಿತಾ ಸೇನ್.