ಬಾಲಿವುಡ್ ಹಿಟ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್. ರಣವೀರ್ ಸಿಂಗ್ ದೀಪಿಕಾಗಾಗಿ 119 ಕೋಟಿ ರೂಪಾಯಿ ಮನೆಯನ್ನು ಖರೀದಿಸಿದ್ದರಂತೆ. ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆ ಆಗಿ 4 ವರ್ಷ ಆಗಿದೆ. ದೀಪಿಕಾಗೆ ಏನಾದ್ರೂ ಗಿಫ್ಟ್ ಕೊಡಬೇಕು ಎಂದುಕೊಂಡಿದ್ದ ರಣವೀರ್ ಅವರು ಈ ಮನೆ ಗಿಫ್ಟ್ ಮಾಡಿದ್ದಾರೆ. ದೀಪಿಕಾ ಅವರಿಗೆ ಖರೀದಿಸಿರುವ ಮನೆ, ಮುಂಬೈನಲ್ಲಿ ಸಲ್ಮಾನ್ ಖಾನ್ ಮತ್ತು ಶಾರೂಖ್ ಖಾನ್ ಮನೆಗೆ ತುಂಬಾ ಹತ್ತಿರ ಇದೆಯಂತೆ. ಐಷಾರಾಮಿ ಉಡುಗೊರೆ ನೀಡಿದ್ದಾರೆ ರಣವೀರ್. ಈ ಮನೆಯು ತುಂಬಾ ಮಾರ್ಡನ್ ಆಗಿದೆಯಂತೆ. ಎಲ್ಲಾ ಸವಲತ್ತುಗಳು ಹೊಂದಿದೆಯಂತೆ. ತಾವೇ ಕುದ್ದ ನಿಂತು ರಣವೀರ್ ಅವರು ಮನೆ ಒಳಗೆ ಡಿಸೈನ್ ಮಾಡಿಸಿದ್ದಾರಂತೆ. ರಣವೀರ್ ಖರೀದಿಸಿರುವ ಮನೆ 11,266 ಚದರಡಿಯನ್ನು ಹೊಂದಿದೆಯಂತೆ. ವಿಶಾಲವಾದ ಟೆರೆಸ್ , ಜಿಮ್, ಸ್ವಿಮ್ಮಿಂಗ್ ಪೂಲ್ ಎಲ್ಲವನ್ನೂ ಹೊಂದಿದೆ. ಹೊಸ ವರ್ಷದ ನಂತರ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಹೊಸ ಮನೆ ಗೃಹ ಪ್ರವೇಶ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಕನಸಿನ ಮನೆಗೆ ಹೋಗೋಕೆ ಈ ಜೋಡಿ ರೆಡಿ ಆಗಿದೆ. ಇಬ್ಬರಿಗೂ ಒಳ್ಳೆಯದಾಗಲಿ ಎಂದು ಅಭಿಮಾನಿಗಳು ವಿಶ್ ಮಾಡಿದ್ದಾರೆ. ಕ್ಯೂಟ್ ಜೋಡಿ ಎಂದು ಹೇಳಿದ್ದಾರೆ. ಪಡುಕೋಣೆ ಹಾಗೂ ರಣವೀರ್ ಸಿಂಗ್ ಹೊಸ ವರ್ಷಾಚರಣೆಗೆ ವಿದೇಶಕ್ಕೆ ತೆರಳಿದ್ದಾರೆ. ಅಭಿಮಾನಿಗಳು ನ್ಯೂ ಇಯರ್ ವಿಶ್ ಮಾಡ್ತಾ ಇದ್ದಾರೆ.