Puneeth Rajkumar: ಜೇಮ್ಸ್ ಅಡ್ಡಾಗೆ ಮತ್ತೋರ್ವ ಬಾಲಿವುಡ್ ನಟನ ಎಂಟ್ರಿ: ಪುನೀತ್ಗೆ ಜೊತೆಯಾದ ನಾಸಿರುದ್ದೀನ್ ಶಾ..! James: ಯುವರತ್ನ ಸಿನಿಮಾದ ಚಿತ್ರೀಕರಣ ಮುಗಿಸಿದ ಬಳಿಕ ಜೇಮ್ಸ್ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್. ಇತ್ತೀಚೆಗಷ್ಟೆ ಜೇಮ್ಸ್ ಚಿತ್ರತಂಡಕ್ಕೆ ಬಿ-ಟೌನ್ ನಟ ಮುಖೇಷ್ ರಿಷಿ ಎಂಟ್ರಿ ಕೊಟ್ಟಿದ್ದಾರೆ. ಈಗ ಮತ್ತೋರ್ವ ಹಿರಿಯ ಬಾಲಿವುಡ್ ನಟ ಪುನೀತ್ಗೆ ಜೊತೆಯಾಗಲಿದ್ದಾರಂತೆ. (ಚಿತ್ರಗಳು ಕೃಪೆ: Naseeruddin Shah Twitter)
1 / 10
ಪುನೀತ್ ರಾಜ್ಕುಮಾರ್ ಅಭಿನಯದ ಜೇಮ್ಸ್ ಸಿನಿಮಾದ ಚಿತ್ರೀಕರಣದ ಜೋರಾಗಿ ಸಾಗಿದೆ.
2 / 10
ಯುವರತ್ನ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡ ತಕ್ಷಣ ಪುನೀತ್ ಜೇಮ್ಸ್ ಚಿತ್ರತಂಡ ಸೇರಿಕೊಂಡಿದ್ದಾರೆ.
3 / 10
ಪುನೀತ್ ರಾಜ್ಕುಮಾರ್ ಸದ್ಯ ಬಳ್ಳಾರಿ ಭಾಗದಲ್ಲಿ ಜೇಮ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
4 / 10
ಈ ಸಿನಿಮಾದಲ್ಲಿ ರಾಜಕುಮಾರ ಸಿನಿಮಾ ಖ್ಯಾತಿಯ ನಟಿ ಪ್ರಿಯಾ ಆನಂದ್ ನಾಯಕಿಯಾಗಿದ್ದಾರೆ.
5 / 10
ಈಗ ಈ ಸಿನಿಮಾಗೆ ಬಾಲಿವುಡ್ ನಟ ನಾಸಿರುದ್ದೀನ್ ಶಾ ಅವರ ಎಂಟ್ರಿ ಆಗಿದೆಯಂತೆ.
6 / 10
ನಾಸಿರುದ್ದೀನ್ ಶಾ ದೊಡ್ಡ ಗ್ಯಾಪ್ನ ನಂತರ ಮತ್ತೆ ಸ್ಯಾಂಡಲ್ವುಡ್ಗೆ ಮರಳಿದ್ದಾರೆ.
7 / 10
ಈ ಹಿಂದೆ ಗಿರೀಶ್ ಕಾರ್ನಾಡ್ ಅವರ ತಬ್ಬಲಿಯೂ ನೀನಾದೆ ಹಾಗೂ ಗೀರಿಶ್ ಕಾಸರವಳ್ಳಿ ಅವರ ಮನೆ ಚಿತ್ರದಲ್ಲಿ ಅಭಿನಯಿಸಿದ್ದಾರೆ.
8 / 10
ಚೇತನ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ನಾಸಿರುದ್ದೀನ್ ಶಾ ಪ್ರಮುಖ ಪಾತ್ರದಲ್ಲಿ ನಟಿಸಲು ಓಕೆ ಮಾಡಿದ್ದಾರಂತೆ.
9 / 10
ನಾಸಿರುದ್ದೀನ್ ಶಾ ಅವರಿಗೂ ಮುನ್ನ ಮತ್ತೋರ್ವ ಬಾಲಿವುಡ್ ನಟ ಮುಖೇಶ್ ರಿಷಿ ಅವರು ಸಹ ಜೇಮ್ಸ್ ತಂಡ ಸೇರಿಕೊಂಡಿದ್ದಾರೆ.
10 / 10
ಅನು ಪ್ರಭಾಕರ್ ಸಹ ಇತ್ತೀಚೆಗಷ್ಟೆ ಚಿತ್ರತಂಡ ಸೇರಿಕೊಂಡಿದ್ದಾರೆ.
First published: November 18, 2020, 11:49 IST