ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಮಾಜಿ ಪತ್ನಿ ಕಿರಣ್ ರಾವ್ ಅವರು ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ.
2/ 8
15 ವರ್ಷಗಳ ಸುದೀರ್ಘ ದಾಂಪತ್ಯವನ್ನು ಕೊನೆಗಳಿಸಿರುವ ಬಾಲಿವುಡ್ ನಟ ಅಮೀರ್ ಖಾನ್-ಕಿರಣ್ ರಾವ್ ಪೂಜೆಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಮೀರ್ ಖಾನ್ ಕಚೇರಿಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿದ್ದಾರೆ.
3/ 8
ನಟ ಅಮೀರ್ ಖಾನ್-ಕಿರಣ್ ರಾವ್ ಅವರ ಫೋಟೋಗಳನ್ನು ಲಾಲ್ ಸಿಂಗ್ ಚಡ್ಡಾ ನಿರ್ದೇಶಕ ಅದ್ವೈತ್ ಚಂದನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
4/ 8
ಅಮೀರ್ ಖಾನ್ ತಮ್ಮ ಆಫೀಸ್ ನಲ್ಲಿ ದೇಸಿ ಡ್ರೆಸ್ ಧರಿಸಿ, ನೆಹರು ಕ್ಯಾಪ್ ಹಾಕಿಕೊಂಡು ಕಳಸ ಪೂಜೆಯನ್ನು ಮಾಡಿದ್ದಾರೆ. ಇವರಿಗೆ ಮಾಜಿ ಪತ್ನಿ ಕಿರಣ್ ರಾವ್ ಅವರು ಸಾಥ್ ನೀಡಿದ್ದಾರೆ.
5/ 8
ಕಳೆದ ವರ್ಷ, ಅಮೀರ್ ಖಾನ್ ಮತ್ತು ಕಿರಣ್ ತಮ್ಮ 15 ವರ್ಷಗಳ ಸುದೀರ್ಘ ದಾಂಪತ್ಯವನ್ನು ಕೊನೆಗೊಳಿಸಿದರು. ಆದಾಗ್ಯೂ, ಅವರು ತಮ್ಮ 11 ವರ್ಷದ ಮಗ ಆಜಾದ್ ರಾವ್ ಖಾನ್ಗೆ ಸಹ-ಪೋಷಕರಾಗಿ ಮುಂದುವರಿಯುತ್ತಾರೆ.
6/ 8
ಲಾಲ್ ಸಿಂಗ್ ಛಡ್ಡಾ ಚಿತ್ರ ಭಾರೀ ಸೋಲು ಕಂಡಿತು. ಅದಕ್ಕೆ ಅಮೀರ್ ಖಾನ್ 1 ವರ್ಷ ಬ್ರೇಕ್ ಪಡೆಯುತ್ತಾರಂತೆ. ಫ್ಯಾಮಿಲಿ ಜೊತೆ ಸಮಯ ಕಳೆದು ಮತ್ತೆ ಚಿತ್ರರಂಗಕ್ಕೆ ವಾಪಸ್ ಬರಲಿದ್ದಾರಂತೆ.
7/ 8
ಅದ್ವೈತ್ ಚಂದನ್ ಶೇರ್ ಮಾಡಿರುವ ಫೋಟೋಗಳಿಗೆ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ. ತುಂಬ ಸುಂದರವಾದ ಫೋಟೋಗಳು, ಈ ಫೋಟೋಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.
8/ 8
ಇನ್ನೂ ಕೆಲವರು, ನಿಜಕ್ಕೂ ಇದು ಆಮಿರ್ ಖಾನ್ ಅವರೇನಾ ಅಂತ ಸಂದೇಹ ಬಂತು, ಅಮೀರ್ ಖಾನ್, ಕಿರಣ್ ರಾವ್ ತುಂಬ ಚೆನ್ನಾಗಿ ಕಾಣುತ್ತಿದ್ದಾರೆ. ಇದು ನಿಜಾನಾ? ಸಿನಿಮಾನಾ ಎಂದು ಕೇಳಿದ್ದಾರೆ. ಜೀವನದಲ್ಲಿ ನೋಡೋಕೆ ಇನ್ನೂ ಏನೂ ಉಳಿದಿಲ್ಲ ಎಂದು ಕೆಲವರು ಕಾಮೆಂಟ್ ಹಾಕಿದ್ದಾರೆ.