2022ರಲ್ಲಿ 6 ತಿಂಗಳುಗಳ ಅಂತ್ಯದಲ್ಲಿದೆ. ಈ 6 ತಿಂಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಹಲವು ಚಿತ್ರಗಳು ಬಿಡುಗಡೆಯಾದವು. ಬಾಲಿವುಡ್ ಬಾಕ್ಸ್ ಆಫೀಸ್ ವರದಿ ನೋಡಿದರೆ ಈ ರೀತಿ ಇದ್ದು, 3 ಹಿಟ್ ಮತ್ತು 6 ಫ್ಲಾಪ್. ಈ ವರ್ಷ ಯಾವುದೇ ನಿರೀಕ್ಷೆ ಇಲ್ಲದೆ ತೆರೆಕಂಡ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಾಲಿವುಡ್ ನಲ್ಲಿ ಮೊದಲ ಹಿಟ್ ಆಗಿ ಸೆನ್ಸೇಷನಲ್ ಸಕ್ಸಸ್ ಆಯಿತು. ಅದರಂತೆ ಯಶಸ್ಸು ಮತ್ತು ಪ್ಲಾಪ್ ಆದ ಚಿತ್ರಗಳ ಲೀಸ್ಟ್ ಇಲ್ಲಿದೆ.
ಕೆಜಿಎಫ್ 2: ಯಶ್ ನಾಯಕನಾಗಿ ಪ್ರಶಾಂತ್ ನೀಲ್ ನಿರ್ದೇಶನದ ಕೆಜೆಎಫ್ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ. ಚಿತ್ರವು ಒಟ್ಟಾರೆ 1250 ಕೋಟಿಗೂ ಹೆಚ್ಚಿನ ಕಲೇಕ್ಷನ್ ಮಾಡುವ ಮೂಲಕ ಈ ವರ್ಷದ ಅತೀ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿದೆ. ಅಲ್ಲದೇ ಬಾಲಿವುಡ್ ನಲ್ಲಿ 435.20 ಕೋಟಿ ಸಂಗ್ರಹವಾಗಿದೆ. ಈ ವರ್ಷ ಬಾಲಿವುಡ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಇದಾಗಿದೆ. ಒಟ್ಟಾರೆಯಾಗಿ, ಹಿಂದಿ ಚಿತ್ರರಂಗದಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು.
ಭೂಲ್ ಭುಲೈಯಾಯಾ 2: ಈ ಚಿತ್ರದಲ್ಲಿ ಕಾರ್ತಿನ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಅನೀಸ್ ಬಾಜ್ಮಿ ನಿರ್ದೇಶನದ 'ಭೂಲ್ ಭುಲೈಯಾ 2' ಮೊದಲ ದಿನದಿಂದ ಬಾಲಿವುಡ್ನಲ್ಲಿ ಹಿಟ್ ಗಳಿಸಿದ್ದು ಮಾತ್ರವಲ್ಲದೆ ಬಾಕ್ಸ್ ಆಫೀಸ್ ಉತ್ತಮ ಗಳಿಕೆ ಮಾಡಿತು. ಈ ಚಿತ್ರವು 262.04 ಕೋಟಿ ಗಳಿಕೆಯೊಂದಿಗೆ ಬ್ಲಾಕ್ ಬಸ್ಟರ್ ಆಯಿತು. ಅಲ್ಲದೇ ಈ ಚಿತ್ರದ ಮೂಲಕ ಬಾಲಿವುಡ್ ಸ್ವಲ್ಪ ಚೇತರಿಕೆ ಕಂಡಿತು.
ಸಾಮ್ರಾಟ್ ಪೃಥ್ವಿರಾಜ್: ಅಕ್ಷಯ್ ಕುಮಾರ್ ಬಾಲಿವುಡ್ ನಲ್ಲಿ ಸರಣಿ ಚಿತ್ರಗಳ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರ ಮೊದಲ ಐತಿಹಾಸಿಕ ಪಾತ್ರ ‘ಸಾಮ್ರಾಟ್ ಪೃಥ್ವಿರಾಜ್’. ಸಿನಿಮಾಗೆ ಒಳ್ಳೆಯ ಪ್ರತಿಕ್ರಯೆಗಳು ಬಂದವು. ಮೇ 3 ರಂದು ಬಿಡುಗಡೆಯಾದ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಮಾಡಲಿಲ್ಲ. 200 ಕೋಟಿಯಲ್ಲಿ ಬೃಹತ್ ಬಜೆಟ್ ನ ಈ ಚಿತ್ರವು ಕೇವಲ ರೂ. 85 ಕೋಟಿ ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ನಿರಾಸೆ ಮೂಡಿಸಿತು.