ಬಾಲಿವುಡ್ ನಲ್ಲಿ 2009ರಲ್ಲಿ ತೆರೆಕಂಡ ಅಮೀರ್ ಖಾನ್, ಆರ್ ಮಾಧವನ್ ಮತ್ತು ಶರ್ಮಾನ್ ಜೋಶಿ ಅಭಿನಯದ 3 ಈಡಿಯಟ್ಸ್ ಚಿತ್ರ ಅಂದಿಗೆ ದಾಖಲೆ ಬರೆದಿತ್ತು. ಇದರ ನಡುವೆ ಈ ಚಿತ್ರದ ಮೇಲಿನ ಕ್ರೇಜ್ ಈಗಲೂ ಅಷ್ಟೇ ಇದ್ದು, ಇದೀಗ ಈ ಚಿತ್ರ ಶೂಟಿಂಗ್ ಮಾಡಿರುವ ಬೆಂಗಳೂರಿನ ಇಂಜನಿಯರಿಂಗ್ ಕಾಲೇಜಿನಲ್ಲಿ ಶೂಟಿಂಗ್ ಸ್ಥಳದ ಫೋಟೋ ವೈರಲ್ ಆಗುತ್ತಿದೆ.