ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಅವರ ತವರೂರಾದ ಮಂಡ್ಯದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ತಮ್ಮೂರಿನ ನಾಯಕನನ್ನು ಕೊನೆಯ ಬಾರಿಗೆ ಕಣ್ತುಂಬಿಕೊಂಡ ಜನರಿಗೆ ಸುಮಲತಾ ಅಂಬರೀಶ್ ಮತ್ತು ಅಭಿಷೇಕ್ ವಂದಿಸಿದರು. ಈ ವೇಳೆ ನಟ ಯಶ್ ಕೂಡ ಜೊತೆಗಿದ್ದರು. ಮಂಡ್ಯದ ಮಣ್ಣಿನಿಂದ ಅಂಬರೀಶ್ ಹಣೆಗೆ ತಿಲಕವಿಟ್ಟ ಸುಮಲತಾ ವಿಶೇಷ ಹೆಲಿಕಾಪ್ಟರ್ನಲ್ಲಿ ಅಂಬರೀಶ್ ಮೃತದೇಹವನ್ನು ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಕರೆತರಲಾಯಿತು.